Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ನಡಾವಳಿ ಮಹೋತ್ಸವ

ಹಳೆಯಂಗಡಿ: ಸಸಿಹಿತ್ಲು  ಶ್ರೀ ಭಗವತೀ ದೇವಸ್ಥಾನದಲ್ಲಿ ನಡಾವಳಿ ಮಹೋತ್ಸವವು  ಶುಕ್ರವಾರ ವಿಜೃಂಭಣೆಯಿಂದ ಜರುಗಿತು. ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಎ.9ರಂದು ರಾತ್ರಿ ಕದಿಕೆ ಭಂಡಾರಮನೆ ಯಿಂದ ಶ್ರೀ ಕ್ಷೇತ್ರಕ್ಕೆ ಭಂಡಾರ ಅಗಮನ, 10ರಂದು ಬೆಳಗ್ಗೆ ನಾಗ ತಂಬಿಲ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ನಡೆಯಿತು
ಶುಕ್ರವಾರ ರಾತ್ರಿ 11ರಿಂದ ನಡಾವಳಿ ಕಾರ್ಯಕ್ರಮ, ಮಹಾ ಪೂಜೆ, ಬಲಿ ಪ್ರಾರಂಭ, ಮೂರ್ತಿ ಬಲಿ, ಕಂಚೀಲು ಸೇವೆ, ಉರುಳು ಸೇವೆ ಹರಕೆ, ತುಲಾಭಾರ ಸೇವೆ  ನಡೆಯಿತು
ಈ ಸಂದರ್ಭ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಆಡಳಿತ ಮೊಕ್ತೇಸರ ಚಂದ್ರಶೇಖರ್ ಬೆಲ್ಚಡ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ, ಮುಂಬೈ ಸಮಿತಿಯ ಅಧ್ಯಕ್ಷ ವೇದ ಪ್ರಕಾಶ್ ಎಂ ಶ್ರೀಯಾನ್, ಆಡಳಿತ ಮಂಡಳಿ ಉಪಾಧ್ಯಕ್ಷ ವಿಶ್ವನಾಥ ಬೆಲ್ಚಡ, ಸಮಿತಿಯ ರಮೇಶ್ ಬಂಗೇರ, ರಾಜೇಂದ್ರ ಪ್ರಸಾದ್ ಎಕ್ಕಾರು, ಶಿವಣ್ಣ ಅಂಚನ್ ಕಾಪು, ಸುರೇಶ್  ಕೆ ಬಂಗೇರ ತೋಕೂರು, ಗುರಿಕಾರರು ಗ್ರಾಮಸ್ಥರು ಉಪಸ್ಥಿತರಿದ್ದರು 
ದೇವಸ್ಥಾನದಲ್ಲಿ ಎ.11ರಂದು  ಭರಣಿ ಮಹೋತ್ಸವದ ಪ್ರಯುಕ್ತ  ಬೆಳಗ್ಗೆ 10.25ಕ್ಕೆ ಮಿಥುನ ಲಗ್ನ ಸುಮುಹೂರ್ತದಲ್ಲಿ ಧ್ವಜಾರೋಹಣ ಹಾಗೂ  ರಾತ್ರಿ ಮಹಾಪೂಜೆಯು ನಡೆಯಿತು. ಎ.12ರಂದು ರಾತ್ರಿ ಪೂತಾಲಂಬ ಬಲಿ, ಮೂರ್ತಿ ದರ್ಶನ, ಪುಷ್ಪಕಲ ಹರಕೆ, ತುಲಾಭಾರ ಸೇವೆ, ಎ.13ರಂದು ರಾತ್ರಿ  ಪಡುನಡೆ, ಅಮೃತಕಲಶ, ಕಂಚೀಲು ಸೇವೆ, ಮೂರ್ತಿ ದರ್ಶನ, ಎ.14ರಂದು ರಾತ್ರಿ  ತಾಲ ಪೋಲ ಬಲಿ ಉತ್ಸವ, ಮೂರ್ತಿ ದರ್ಶನ, ಚತುರ್ಕಳ, ಎ.15ರಂದು ರಾತ್ರಿ 9ರಿಂದ, ಮೂಡುನಡೆ ಬಲಿ, ಮೂರ್ತಿ ದರ್ಶನ, ಕಂಚೀಲು ಸೇವೆ, ಉರುಳು ಸೇವೆ, ಸರ್ಪಕಳ, ಅಮೃತಕಲಶ, ತೂಟೆದಾರ, ತುಲಾಭಾರ ಸೇವೆ, ಎ.16ರಂದು ಬೆಳಗ್ಗೆ ಧ್ವಜಾ ವರೋಹಣ, ಭಂಡಾರ ನಿರ್ಗಮನ ನಡೆಯಲಿದೆ.
ಎ.19ರಂದು ಬೆಳಗ್ಗೆ 6.17ರಿಂದ ಓಂ ನಮೋ ಭಗವತೆ ವಾಸುದೇವಾಯ ದ್ವಾದಶಾಕ್ಷರ ಮಂತ್ರೋಚ್ಛಾರ, ಎ.20ರಂದು ಬೆಳಗ್ಗೆ 6.16ಕ್ಕೆ ಮಹಾ ಮಂಗಳಾರತಿ, ಎ.22ರಂದು ಕದಿಕೆ ಭಂಡಾರ ಮನೆಯಲ್ಲಿ ದೀಪಾರಾಧನೆ, ಪ್ರೊಕಣ್ಣ ದೈವ, ಇತರ ದೈವಗಳಿಗೆ ತಂಬಿಲ ನಡೆಯಲಿದೆ.