Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕೊಡೆತ್ತೂರು ಕಟ್ಟಪುಣಿ ಅಶ್ವಥ ಗುಂಡಿ ಸಮೀಪ ನಡುಗೋಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಾಲು ಸಂಕ ನಿರ್ಮಾಣಕ್ಕೆ ಶಂಕು ಸ್ಥಾಪನೆ

ಕಿನ್ನಿಗೋಳಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮೆನ್ನಬೆಟ್ಟು ಗ್ರಾಮದ ಕೊಡೆತ್ತೂರು ಕಟ್ಟಪುಣಿ ಅಶ್ವಥ ಗುಂಡಿ ಸಮೀಪ ನಡುಗೋಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಾಲು ಸಂಕ  ನಿರ್ಮಾಣಕ್ಕೆ ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್  ಅವರು ಶಂಕು ಸ್ಥಾಪನೆ ನೆರವೇರಿಸಿದರು.
ಈ ಸಂಧರ್ಭ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಉಪಾಧ್ಯಕ್ಷೆ ಪದ್ಮಲತಾ ರಾವ್, ಸದಸ್ಯರಾದ ದಾಮೋದರ ಶೆಟ್ಟಿ ಕೊಡೆತ್ತೂರು, ಪ್ರಕಾಶ್ ಆಚಾರ್ಯ, ಮಲ್ಲಿಕಾ ಆಚಾರ್ಯ, ಶೈಲೇಶ್ ಅಂಚನ್, ಪ್ರಣೀಕ್ ಕಿನ್ನಿಗೋಳಿ, ಈಶ್ವರ್ ಕಟೀಲ್, ಅಭಿಲಾಷ್ ಶೆಟ್ಟಿ ಕಟೀಲ್, ಭುವನಾಭಿರಾಮ ಉಡುಪ, ಕೇಶವ ಕರ್ಕೇರ,ಪ್ರಕಾಶ್ ಶೆಟ್ಟಿ ಸಂಕಯ್ಯ ಬೆನ್ನಿ, ಸರೋಜಿನಿ ಸುಧಾಕರ್, ಕಿಶೋರ್ ಶೆಟ್ಟಿ ಕೊಡೆತ್ತೂರು, ಗೋಪಾಲ, ಮಿಥುನ್ ಆಚಾರ್ಯ ಮತ್ತು ಸ್ಥಳೀಯ  ಗ್ರಾಮಸ್ಥರು ಉಪಸ್ಥಿತರಿದ್ದರು.