Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕೊಳಚಿಕಂಬಳ ಶ್ರೀ ಜಾರಂದಾಯ, ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ

ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿಕ್ಕೊಳಪಟ್ಟ ಕೊಳಚಿಕಂಬಳ ಶ್ರೀ ಜಾರಂದಾಯ,ಧೂಮಾವತಿ  ದೈವಸ್ಥಾನದಲ್ಲಿ ಶ್ರೀ ಜಾರಂದಾಯ, ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು. 
  ಶನಿವಾರದಂದು  ಮಧ್ಯಾಹ್ನ    ಶ್ರೀ ಜಾರಂದಾಯ ಮತ್ತು ಧೂಮಾವತಿ  ದೈವದ ದರ್ಶನದೊಂದಿಗೆ   ಭಂಡಾರ ಇಳಿದು ಧ್ವಜಾರೋಹಣ ನಡೆಯಿತು
ಎ.12 ಭಾನುವಾರ ಬೆಳಗ್ಗೆ ದೈವಸ್ಥಾನದ ನಾಗ ಸನ್ನಿದಿಯಲ್ಲಿ  ನಾಗತಂಬಿಲ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ,
ರಾತ್ರಿ   ಶ್ರೀ ಜಾರಂದಾಯ, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.