ಶಿಮಂತೂರು ಹಿಂದೂ ರುದ್ರ ಭೂಮಿ ರಚನೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಆರ್ಥಿಕ ಸಹಾಯ
ಮೂಲ್ಕಿ :ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ.ಬಿ ಸಿ ಟ್ರಸ್ಟ್ (ರಿ ) ಬಜಪೆ ತಾಲೂಕು ವಾಪ್ತಿಯ ಕಿಲ್ಪಾಡಿ ವಲಯದ ಕಿಲ್ಪಾಡಿ ಕಾರ್ಯ ಕ್ಷೇತ್ರದ ಶಿಮಂತೂರು ಗ್ರಾಮದಲ್ಲಿ ಹಿಂದೂ ರುದ್ರ ಭೂಮಿ ರಚನೆ ಗೊಳ್ಳುತ್ತಿದ್ದು. ಇದರ ಸಮಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಪದಾಧಿಕಾರಿಗಳು ಮತ್ತು ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು 2,50,000/ ರೂ ಅನುದಾನವನ್ನು ನೀಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಬಜಪೆ ತಾಲೂಕು ಯೋಜನಾಧಿಕಾರಿ ಗಿರೀಶ್ ಅವರು ಸಮಿತಿ ಸದಸ್ಯರಿಗೆ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು. ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತಾಲೂಕು ಜನ ಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ, ಕಿನ್ನಿಗೋಳಿ ಯುಗ ಪುರುಷದ ಭುವನಾಬಿರಾಮ ಉಡುಪ, ಹಿಂದೂ ರುದ್ರ ಭೂಮಿ ಸಮಿತಿ ಉಪಾಧ್ಯಕ್ಷ ನವೀನ್, ಕೋಶಾಧಿಕಾರಿ ತಾರಾನಾಥ್, ಸದಸ್ಯರಾದ ಸಂಪತ್, ರಾಜೇಶ್ ಕೆಂಚನಕೆರೆ. ಜಿತೇಶ್, ಜನಜಾಗೃತಿ ವಲಯದ ಸದಸ್ಯ ಹೇಮಚಂದ್ರ ಶೆಟ್ಟಿಗಾರ್ , ವಲಯದ ಮೇಲ್ವಿಚಾರಕಿ ಲಲಿತಾ, ಸೇವಾಪ್ರತಿನಿಧಿಗಳಾದ, ಪ್ರಮೀಳಾ, ಸುಕನ್ಯಾ, ಉಪಸ್ಥಿತರಿದ್ದರು. ರಾಜೇಶ್ ಕೆಂಚನಕೆರೆ ಸ್ವಾಗತಿಸಿ. ಜಿತೇಶ್ ರವರು ಧನ್ಯವಾದವಿತ್ತರು.