“ರಜಾದೊಂದಿಗೆ ಮಜಾ” – ಮೂಲ್ಕಿ ನಾರಾಯಣ ಗುರು ಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನೆ
ಮೂಲ್ಕಿ:ಮಕ್ಕಳ ಕೈಗೆ ಪುಸ್ತಕ ನೀಡಿ, ಮೊಬೈಲ್ ಬಿಡಿ ಎಂಬ ಸಂದೇಶ ದೊಂದಿಗೆ ನಮ್ಮ ಭೂಮಿ, ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ಪ್ರಾಧ್ಯಾಪಕ, ರಂಗಭೂಮಿ ಕಲಾವಿದ ರಾಮಾಂಜಿ ಅವರು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ಹಾಗೂ ಮಕ್ಕಳ ಆತ್ಮಸ್ಥೈರ್ಯವನ್ನು ವೃದ್ಧಿಪಡಿಸುವ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಶ್ರೀ ನಾರಾಯಣ ಗುರು ವಿದ್ಯಾಸಂಸ್ಥೆ, ಮೂಲ್ಕಿ ಮತ್ತು ಓಂಕಾರ ಕಲಾಸಂಗಮ, ಪಡುಬಿದ್ರೆ ಸಹಯೋಗದಲ್ಲಿ ಆಯೋಜಿಸಿರುವ ಬೇಸಿಗೆ ಶಿಬಿರವು ಏ 5 ರಂದು ಯಶಸ್ವಿಯಾಗಿ ಪ್ರಾರಂಭಗೊಂಡಿತು.
ಶಿಬಿರದಲ್ಲಿ ಶಾಲಾ ಸಂಚಾಲಕ ಹರೀಂದ್ರ ಸುವರ್ಣ ಅವರು ಮಾತನಾಡಿ ಮಕ್ಕಳ ರಜೆಯನ್ನು ಸಂತೋಷದಿಂದ, ಚಟುವಟಿಕೆಯಿಂದ ನಡೆಸಿಕೊಳ್ಳಬೇಕು ಎಂದರು. ಬಾಲಚಂದ್ರ ಸನಿಲ್ ಅವರು ಶಿಬಿರವನ್ನು ಉದ್ಘಾಟಿಸಿದರು.ಓಂಕಾರ ಕಲಾಸಂಗಮದ ನಿರ್ದೇಶಕಿ ಶ್ರೀಮತಿ ಗೀತಾ ಅರುಣ್ ಮಕ್ಕಳ ಬೆಳವಣಿಗೆಯ ಕುರಿತು ಮಾರ್ಗದರ್ಶನ ನೀಡಿದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಗೀತಾ ಶೆಟ್ಟಿ ಶಿಬಿರದ ಉದ್ದೇಶದ ಬಗ್ಗೆ ವಿವರಿಸಿದರು.
ಶಾಲಾ ಪ್ರಾಂಶುಪಾಲ ಯತೀಶ್ ಅಮೀನ್ ಸ್ವಾಗತಿಸಿದರು.ಸಮಾಜ ಶಿಕ್ಷಕ ಪ್ರಥ್ವಿರಾಜ್ ಕಾರ್ಯಕ್ರಮ ನಿರೂಪಿಸಿದರು.ಕನ್ನಡ ಶಿಕ್ಷಕಿ ಶ್ರೀಮತಿ ಸಾವಿತ್ರಿ ಧನ್ಯವಾದವಿತ್ತರು. ಅರ್ಪಿಸಿದರು.ಬಳಿಕ ಸಂಪನ್ಮೂಲ ವ್ಯಕ್ತಿಗಳಿಂದ ಮನಸ್ಸನ್ನು ಅರಳಿಸುವ ಚಟುವಟಿಕೆಗಳು ಯಶಸ್ವಿಯಾಗಿ ಸಂಪನ್ನಗೊಂಡಿತು.