ಕೇವಲ ಮಹಿಳಾ ಮೀಸಲಾತಿ ಪ್ರತ್ಯೇಕವಾಗಿ ಜಾರಿಗೊಳಿಸಿ - ಬಿ.ರಮನಾಥ ರೈ
ಮೂಲ್ಕಿ:ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿಯನ್ನು ಅನುಷ್ಠಾನಗೊಳಿಸುವ ಬದಲಾಗಿ ಇದರೊಂದಿಗೆ ಕ್ಷೇತ್ರ ವಿಸ್ತರಣೆ ಹಾಗೂ ಕ್ಷೇತ್ರವಿಂಗಡಣೆಯನ್ನು ಸೇರಿಸಿ ಜಾರಿಗೊಳಿಸಲು ಯತ್ನಿಸುತ್ತಿದ್ದು ಇದು ಪ್ರಜಾಪ್ರಭುತ್ವದ ಕಗ್ಗೊಲೆ ಇಂತಹ ಕಾಯ್ದೆಯನ್ನು ದೇಶದ ಜನತೆ ಒಪ್ಪುವುದಿಲ್ಲ, ಇದರ ವಿರುದ್ಧ ಮಹಿಳೆಯರು ಜನಾಂದೋಲನ ನಡೆಸಲು ಸಜ್ಜಾಗುವಂತೆ ಕರ್ನಾಟಕ ಸರಕಾರದ ಮಾಜಿ ಸಚಿವ ಬಿ. ರಮಾನಾಥ ರೈ ರವರು ಕರೆ ನೀಡಿದರು.
ಅವರು ಹಳೆಯಂಗಡಿಯಲ್ಲಿರುವ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಬೂಡ ಅಧ್ಯಕ್ಷ ಬೇಬಿ ಕುಂದರ್, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಸಹಕಾರಿ ವಿಭಾಗದ ಅಧ್ಯಕ್ಷ ಸುದರ್ಶನ್ ಜೈನ್, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಲ್ಮಾ ಡಿಕೋಸ್ತ, ಕಾಂಗ್ರೆಸ್ ನಾಯಕರುಗಳಾದ ಹಸನಬ್ಬ ಬಾಳ, ಗೋಪಿನಾಥ ಪಡಂಗ, , ಮೋನಪ್ಪ ಶೆಟ್ಟಿ ಎಕ್ಕಾರು, ಪ್ರಮೋದ್ ಕುಮಾರ್ , ದೀಪಕ್ ಪೆರ್ಮುದೆ, ಪುತ್ತು ಬಾವ, ಆಲ್ವಿನ್ ಡಿಕುನ್ಹ, ರಜಾಕ್ ಸೂರಿಂಜೆ, ಅಶೋಕ್ ಪೂಜಾರ್, ಧರ್ಮಾನಂದ ಶೆಟ್ಟಿಗಾರ್, ಟಿ ಹೆಚ್ ಮಯ್ಯದಿ, ರಿಚರ್ಡ್ ಐಕಳ ಮೊದಲಾದವರು ಉಪಸ್ಥಿತರಿದ್ದರು.
ಮುಲ್ಕಿ ಬ್ಲಾಕ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಸ್ವಾಗತಿಸಿ, ಕೆಪಿಸಿಸಿ ಸದಸ್ಯ ಹೆಚ್ ವಸಂತ್ ಬರ್ನಾಡ್ ವಂದಿಸಿದರು.