ಮುಲ್ಕಿ ತಾಲೂಕಿನ ಆಡಳಿತ ಸೌಧ,ನೂತನ ಪ್ರಜಾಸೌಧದಲ್ಲಿ ಮುಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ರವರ ಸೇವಕ ಕಚೇರಿಯ ಕಾರ್ಯಾರಂಭ
ಮುಲ್ಕಿ: ಮುಲ್ಕಿ ತಾಲೂಕಿನ ಆಡಳಿತ ಸೌಧ,ನೂತನ ಪ್ರಜಾಸೌಧದಲ್ಲಿ ಮುಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ರವರ ಸೇವಕ ಕಚೇರಿಯು ಶುಕ್ರವಾರ ಕಾರ್ಯಾರಂಭಗೊಂಡಿತು. ಕಟೀಲು ದೇವಳದ ಅರ್ಚಕ ವೇದಮೂರ್ತಿ ಹರಿನಾರಾಯಣ ದಾಸ ಆಸ್ರಣ್ಣ ಅವರು ದೀಪ ಬೆಳಗಿಸಿ ಶಾಸಕರ ಸೇವಕ ಕಚೇರಿ ಉದ್ಘಾಟಿಸಿ ಆಶೀರ್ವದಿಸಿದರು.ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರು ಶುಭ ಹಾರೈಸಿದರು.ಈ ಸಂದರ್ಭ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್,ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು, ಜ್ಯೋತಿಷಿ ವಿಶ್ವನಾಥ ಭಟ್,ಮುಲ್ಕಿ ತಾಲೂಕು ತಹಶಿಲ್ದಾರ್ ಶ್ರೀಧರ ಮುಂದಲಮನಿ, ಉಪತಹಶಿಲ್ದಾರ್ ದಿಲೀಪ್ ರೋಡ್ಕರ್, ಮಾಜೀ ಸಚಿವ ಕೃಷ್ಣ ಜೆ ಪಾಲೆಮಾರ್, ಉದ್ಯಮಿ ಅರವಿಂದ ಪೂಂಜಾ ಕಾರ್ನಾಡ್, ಬಿಜೆಪಿ ನಾಯಕರಾದ ಮೇಘನಾಥ ಶೆಟ್ಟಿ, ಮೂಡಬಿದ್ರೆ, ಬಾಹುಬಲಿ ಪ್ರಸಾದ್, ಮಂಡಲಾಧ್ಯಕ್ಷ ದಿನೇಶ್ ಪುತ್ರನ್,ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ವೆಂಕಟರಮಣ ದೇವಸ್ಥಾನದ ಮೊಕೇಸರ ಅತುಲ್ ಕುಡ್ವ, ಭುವನಾಭಿರಾಮ ಉಡುಪ, ದೇವಪ್ರಸಾದ್ ಪುನರೂರು,ರಂಗನಾಥ ಶೆಟ್ಟಿ, ವಿನೋದ್ ಸಾಲ್ಯಾನ್ ಬೆಳ್ಳಾಯರು, ಡಾ. ಹರಿಶ್ಚಂದ್ರ ಪಿ ಸಾಲ್ಯಾನ್, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು, ಮುಲ್ಕಿ ನಗರ ಪಂಚಾಯತ್ ಮಾಜೀ ಅಧ್ಯಕ್ಷ ಸತೀಶ್ ಅಂಚನ್, ಉದ್ಯಮಿ ಶರತ್ ಸಾಲ್ಯಾನ್ ಬೆಂಗಳೂರು, ರಾಮಚಂದ್ರ ನಾಯ್ಕ ಕೋಲ್ನಾಡ್ ಗುತ್ತು, ಪಾಂಡುರಂಗ ಭಟ್ ಎಸ್ ವಿ ಟಿ,,ಈಶ್ವರ ಕಟೀಲು, ದೇವಿಪ್ರಸಾದ್ ಕೆಂಪುಗುಡ್ಡೆ, ಲಕ್ಷ್ಮಣ ಸಾಲ್ಯಾನ್ ಪುನರೂರು, ರಂಜಿತ್ ಪೂಜಾರಿ ತೊಡಾರ್, ಮನೋಹರ ಕೋಟ್ಯಾನ್,ಹರ್ಷರಾಜ ಶೆಟ್ಟಿ,ಪುರುಷೋತ್ತಮ ಬಡಗುಹಿತ್ತು, ಸ್ಟೇನಿ ಪಿಂಟೋ ಕಿನ್ನಿಗೋಳಿ,ನವೀನ್ ರಾಜ್, ಜೀವನ್ ಶೆಟ್ಟಿ ಅಂಗರಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ ಕಾರ್ಯಕ್ರಮ ನಿರೂಪಿಸಿದರು