Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ:ಕುಬೆವೂರು ಶ್ರೀ ಜಾರಂದಾಯ ದೈವಸ್ಥಾನದದಲ್ಲಿ ವಿಜೃಂಭಣೆಯ ನೇಮೋತ್ಸವ

ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ಇತಿಹಾಸ ಪ್ರಸಿದ್ಧ ಕುಬೆವೂರು ಶ್ರೀ ಜಾರಂದಾಯ ದೈವಸ್ಥಾನದಲ್ಲಿ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು
ಗುರುವಾರ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ರಾತ್ರಿ  ಶ್ರೀ ಜಾರಂದಾಯ ದೈವದ ನೇಮೋತ್ಸವ, ಬಂಡಿ ಉತ್ಸವ, ತೂಟೆದಾರ, ಬದಿಕರ ಬಲಿ, ಪ್ರಸಾದ ವಿತರಣೆ ನಡೆಯಿತು
ಈ ಸಂದರ್ಭ ವ್ಯಾಸರಾಯ ಶ್ರೀಮಂತ್ರಾಯ, ದೇವಸ್ಥಾನದ ಜೀರ್ಣೋದ್ಧಾರ  ಸಮಿತಿಯ ಸತೀಶ್ ಶೆಟ್ಟಿ ಕೆಂಚನಕೆರೆ, ವಿಜಯಕುಮಾರ್ ಕುಬೆವೂರು, ಅಶ್ವಿನ್ ಆಳ್ವ, ಶ್ರೀಕಾಂತ್ ಶೆಟ್ಟಿ, ಮೋಹನ್ ದಾಸ್ ಶೆಟ್ಟಿ, ಜಯಕುಮಾರ್, ಚಂದ್ರಶೇಖರ ಶೆಟ್ಟಿ,ಕೃಷ್ಣ ಶೆಟ್ಟಿ,ವಿಕಾಸ್ ಶೆಟ್ಟಿ, ದಿವಾಕರ ಶೆಟ್ಟಿ, ಶರತ್ ಕುಬೆವೂರು, ನಾಗೇಂದ್ರ, ನಾಗರಾಜ ಕುಲಾಲ್, ರಾಜೇಶ್,, ಪ್ರಕಾಶ್ ಶೆಟ್ಟಿ ನಾರಾಯಣ ರೈ ಮತ್ತಿತರರು ಉಪಸ್ಥಿತರಿದ್ದರು 
 ಶುಕ್ರವಾರ ಧ್ವಜಾವರೋಹಣ ಹಾಗೂ ಮಾಯಂದಾಲ ನೇಮೋತ್ಸವ ನಡೆಯಿತು