Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಏ.11 - 13 :ಕೊಳಚಿಕಂಬಳ ಶ್ರೀ ಜಾರಂದಾಯ ದೈವಸ್ಥಾನದ ನೇಮೋತ್ಸವ

ಮೂಲ್ಕಿ:ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ  ಆಡಳಿಕ್ಕೊಳಪಟ್ಟ ಕೊಳಚಿಕಂಬಳ ಶ್ರೀ ಜಾರಂದಾಯ,ಧೂಮಾವತಿ  ದೈವಸ್ಥಾನದಲ್ಲಿ ಶ್ರೀ ಜಾರಂದಾಯ, ಧೂಮಾವತಿ ಮತ್ತು ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವವು ಏಪ್ರಿಲ್‌ 11 ರಿಂದ 13 ರ ವರೆಗೆ ಜರಗಲಿದೆ.ಎಪ್ರಿಲ್‌ 11 ರ  ಶನಿವಾರ ಮಧ್ಯಾಹ್ನ  4 ಕ್ಕೆ  ಭಂಡಾರ ಇಳಿದು ಧ್ವಜಾರೋಹಣ,12 ರ  ಆದಿತ್ಯವಾರ ಬೆಳಗ್ಗೆ 10 ಕ್ಕೆ ಧೈವಸ್ಥಾನದ ನಾಗ ಸನ್ನಿದಿಯಲ್ಲಿ ಅಂಚನ್ ಮೂಲದವರ ನಾಗತಂಬಿಲ,ಮಧ್ಯಾಹ್ನ  ಅನ್ನಸಂತರ್ಪಣೆ,

ರಾತ್ರಿ 9.30ಕ್ಕೆ  ಶ್ರೀ ಜಾರಂದಾಯ, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ,13 ರ  ಸೋಮವಾರ ಮಧ್ಯಾಹ್ನ 3.30ಕ್ಕೆ  ಮಾಯಂದಾಳ ದೈವದ ನೇಮೋತ್ಸವ ಜರಗಲಿದೆಯೆಂದು ಪ್ರಕಟಣೆ ತಿಳಿಸಿದೆ.