Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಮಹೋತ್ಸವ

ಮೂಲ್ಕಿ :ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ  ಮಹೋತ್ಸವವು ಏ.1 ರಿಂದ ಮೊದಲ್ಗೊಂಡು ಏ.9  ರ ತನಕ ವಿಜೃಂಭಣೆಯಿಂದ ಜರುಗಲಿದೆ.
ಮಾ. 31ರ  ಮಂಗಳವಾರದಂದು  ಅಂಕುರಾರೋಹಣ,ಏ. 1ರ ಬುಧವಾರದಂದು ಮಧ್ಯಾಹ್ನ 11:30ಕ್ಕೆ ಧ್ವಜಾರೋಹಣ, ಶ್ರೀ ದೇವಿ ಮತ್ತು ಶ್ರೀ ಭಗವತಿಯವರ ಭೇಟಿ,  ರಾತ್ರಿ  7 ಕ್ಕೆ ಉತ್ಸವ ಬಲಿ ,ಏ .2ರ ಗುರುವಾರ
ರಾತ್ರಿ 7 ಕ್ಕೆ ಉತ್ಸವ ಬಲಿ, ಮಾ.3 ರ ಶುಕ್ರವಾರ  ರಾತ್ರಿ 7 ಕ್ಕೆ ಪೇಟೆ ಸವಾರಿ ,ಏ.4 ರ ಶನಿವಾರ  ರಾತ್ರಿ 7 ಕ್ಕೆ ಕೊಪ್ಪಲ ಸವಾರಿ, ಏ.5 ರ  ಅದಿತ್ಯವಾರ ರಾತ್ರಿ 7 ಕ್ಕೆ ಬಾಕಿಮಾರು ದೀಪೋತ್ಸವ,ಏ.6  ರ 
 ಸೋಮವಾರ ರಾತ್ರಿ  7 ಕ್ಕೆ ಕೆರೆ ದೀಪೋತ್ಸವ,ಏ.7 ರ ಮಂಗಳವಾರ ಮಧ್ಯಾಹ್ನ  12-00ಕ್ಕೆ ಹಗಲು ರಥೋತ್ಸವ,  ರಾತ್ರಿ ಉತ್ಸವ ಬಲಿ, ಶಯನೋತ್ಸವ,ಏ.8 ರ  ಬುಧವಾರ  ಬೆಳಿಗ್ಗೆ  7-30ಕ್ಕೆ ಕವಾಟೋದ್ಘಾಟನೆ,ಸಂಜೆ  7 ಕ್ಕೆ ಉತ್ಸವ ಬಲಿ, ಓಕುಳಿ,ಶ್ರೀ ದೇವಿ ಮತ್ತು ಸಸಿಹಿತ್ಲು  ಶ್ರೀ ಭಗವತಿಯರ ಭೇಟಿ, ಮಹಾ ರಥೋತ್ಸವ, ಅವಭ್ರತ ಧ್ವಜಾವರೋಹಣ,ಏ.9 ರ  ಗುರುವಾರ ಊರ ಪರವೂರ ಭಕ್ತಾಧಿಗಳಿಂದ ಹಣ್ಣು ಕಾಯಿ ಸಮರ್ಪಣೆ,ಮಧ್ಯಾಹ್ನ ಸಂಪ್ರೋಕ್ಷಣೆ, ಮಹಾ ಮಂತ್ರಾಕ್ಷತೆ,ಏ.12 ರ  ಅದಿತ್ಯವಾರ ಶ್ರೀ ದೇವಸ್ಥಾನಕ್ಕೆ ಸಂಬಂಧಪಟ್ಟ ಕೊಳಚಿಕಂಬಳ ಶ್ರೀ ಜಾರಂದಾಯ ದೈವದ ನೇಮೋತ್ಸವ ನಡೆಯಲಿದೆ.