ಕಿನ್ನಿಗೋಳಿ:ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ವತಿಯಿಂದ ಹಗ್ಗ-ಜಗ್ಗಾಟ ಸ್ಪರ್ಧೆ ಉದ್ಘಾಟನೆ
ಕಿನ್ನಿಗೋಳಿ :ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ ದಕ್ಷಿಣ ಕನ್ನಡ- ಉಡುಪಿ ಜಿಲ್ಲಾ ಮಟ್ಟದ ಪುರುಷರ ಮತ್ತು ಮಹಿಳೆಯರ ಹಗ್ಗ-ಜಗ್ಗಾಟ ಸ್ಪರ್ಧೆಯು ಕಿನ್ನಿಗೋಳಿ ಸೈಂಟ್ ಮೇರೀಸ್ ಸ್ಪೆಷಲ್ ಸ್ಕೂಲ್, ಚರ್ಚ್ ಬಳಿಯಲ್ಲಿ ನಡೆಯಿತು
ಸ್ಪರ್ಧೆಯನ್ನು ಕಿನ್ನಿಗೋಳಿ ಕೊಸoಸಾವ್ ಚರ್ಚ್ ನ ಧರ್ಮ ಗುರುಗಳಾದ ಫಾ.ಜೋಕಿಂ ಫೆರ್ನಾಡಿಸ್ ಉದ್ಘಾಟಿಸಿ ಮಾತನಾಡಿ ಸಮಾಜ ಒಬ್ಬರನ್ನೊಬ್ಬರು ಪ್ರೀತಿಸಿ ಕಾರ್ಯೋನ್ಮುಖರಾದರೆ ಅಭಿವೃದ್ಧಿ ಸಾಧ್ಯ, ಉತ್ಸಾಹ ಭರಿತ ಕ್ರೀಡಾ ಕಾರ್ಯಕ್ರಮ, ತಂಡದ ಒಗ್ಗಟ್ಟು ಜಯವನ್ನು ನಿರ್ಧರಿಸುತ್ತದೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷರಾದ ಡಾ.ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ವಹಿಸಿ ಮಾತನಾಡಿ ಬಲಿಷ್ಠ ಭಾರತವನ್ನು ಕಟ್ಟುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ.ತಮ್ಮ ಸೇವಾ ಸಂಸ್ಥೆಗಳ ಮೂಲಕ ಶಿಕ್ಷಣ,ಕ್ರೀಡೆ ಸಹಿತ ಅನೇಕ ಸಮಾಜಮುಖಿ ಕಾರ್ಯಗಳು ನಡೆಯುತ್ತಿದ್ದು ಕಿನ್ನಿಗೋಳಿಯ ವಿಶೇಷ ಚೇತನ ಶಾಲೆಗೆ ಪ್ರೇರಣಾ ಶಕ್ತಿಯಾಗಿ ನಿರಂತರವಾಗಿ ಕಾರ್ಯಕ್ರಮಗಳು ನಡೆಯಲಿದೆ ಎಂದರು
ಮುಖ್ಯ ಅತಿಥಿಗಳಾಗಿ ಕ್ಷೇತ್ರದ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ ಮಲ್ಲಿಗೆಯಂಗಡಿ,.ಸದಸ್ಯರಾದ ಪ್ರಕಾಶ್ ಆಚಾರ್ಯ, ಪ್ರಣೀಕ್ ಕೋಟ್ಯಾನ್,ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಜೋಸೆಫ್ ಕ್ವಾಡ್ರಸ್,ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಸಾಯಿನಾಥ ಶೆಟ್ಟಿ, ನಿವೃತ್ತ ಉಪನ್ಯಾಸಕ ಸೋಂದಾ ಭಾಸ್ಕರ ಭಟ್,ನಿಡ್ಡೋಡಿ ದುರ್ಗಾದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭಾಸ್ಕರಾ ದೇವಸ್ಯ, ಉದ್ಯಮಿ ಅಭಿಲಾಶ್ ಶೆಟ್ಟಿ ಕಟೀಲು, ,ತೋಕೂರು ಶ್ರೀದೇವಿ ಮಹಿಳಾ ಮಂಡಳಿ, ಅಧ್ಯಕ್ಷೆ ವಿಲಾಸಿನಿ ಮೆಂಡನ್ ಸಾಮಾಜಿಕ ಕಾರ್ಯಕರ್ತ ಸ್ಟ್ಯಾನಿ ಪಿಂಟೋ ,ಕಿನ್ನಿಗೋಳಿ ಸೈಂಟ್ ಮೇರೀಸ್ ಸ್ಪೆಷಲ್ ಸ್ಕೂಲ್ ಕಾರ್ಯದರ್ಶಿ ಶೈಲಾ ಸಿಕ್ವೇರಾ,, ,ಜೆ ಬಿ ಫ್ರೆಂಡ್ಸ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಸೇವಾ ಸಂಸ್ಥೆ ಸಂಚಾಲಕರಾದ ನರಸಿಂಹ ಮಡಿವಾಳ,ಮುಲ್ಕಿ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಪುನೀತ ಕೃಷ್ಣ , ಮತ್ತಿತರರು ಉಪಸ್ಥಿತರಿದ್ದರು
ಸೇವಾ ಸಂಸ್ಥೆಯ ಸಂಚಾಲಕರಾದ ಶರತ್ ಶೆಟ್ಟಿ, ಸ್ವಾಗತಿಸಿ ನಿರೂಪಿಸಿದರು, ಶ್ರೀಶ ಸರಾಫ್ ಐಕಳ ಧನ್ಯವಾದ ಅರ್ಪಿಸಿದರು.ಬಳಿಕ ಹಗ್ಗ ಜಗ್ಗಾಟ ಪಂದ್ಯಾಟ ನಡೆಯಿತು