Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಲಾವಿದ ರಾಜೇಶ್ ಕೆಂಚನಕೆರೆಯವರಿಗೆ ಕೋಡು‌ ಗುರುರಾಜ ಭಟ್ ಪ್ರಶಸ್ತಿ

 ಕಿನ್ನಿಗೋಳಿ‌:ರಂಗಭೂಮಿ ಯಲ್ಲಿ ಮಹೋನ್ನತ ಸಾಧನೆ ಮಾಡಿದ ಕಲಾವಿದರಿಗೆ ಪ್ರತೀ ವರ್ಷ ನೀಡಲಾಗುವ ಕೋಡು‌ ಗುರುರಾಜ ಭಟ್ ಪ್ರಶಸ್ತಿಯನ್ನು ಈ ಬಾರಿ ರಂಗನಟ ರಾಜೇಶ್ ಕೆಂಚನಕೆರೆಯವರಿಗೆ ನೀಡಲಾಗುವುದು.ಸುರಗಿರಿ‌ ಯುವಕ ಮಂಡಲದ ನೇತೃತ್ವದಲ್ಲಿ ಈ ಪ್ರಶಸ್ತಿಯನ್ನು ಪ್ರತೀ‌ ವರ್ಷ ನೀಡಲಾಗುತ್ತಿದ್ದು,ಎಪ್ರಿಲ್ 27 ರಂದು ನಡೆಯುವ 56ನೇ ವಾರ್ಷಿಕೋತ್ಸವದ ಸಂದರ್ಭ ನೀಡಲಾಗುವುದೆಂದು ಯುವಕ ಮಂಡಲದ ಪ್ರಕಟಣೆ ತಿಳಿಸಿದೆ.ರಾಜೇಶ್ ಕೆಂಚನಕೆರೆಯವರು ರಂಗಭೂಮಿ ಕಲಾವಿದರಾಗಿ‌ ಸುಮಾರು 35 ವರ್ಷಗಳಿಂದ ಸಕ್ರಿಯರಾಗಿದ್ದಾರೆ.ಮಂಗಳೂರಿನ ಚಾ ಪರ್ಕ,ಕಿನ್ನಿಗೋಳಿಯ ವಿಜಯಾ ಕಲಾವಿದರು,ಮಂಗಳೂರಿನ ಲಕುಮಿ ತಂಡ ಸಹಿತ ವಿವಿಧ ನಾಟಕ ತಂಡಗಳಲ್ಲಿ‌ ಅಭಿನಯ ಮಾಡಿದ್ದಾರೆ. ಹಲವು ತುಳು ಸಿನಿಮಾ ಗಳಲ್ಲಿ ಯೂ ಅಭಿನಯಿಸಿರುವ ಇವರು ಉತ್ತಮ ಯಕ್ಷಗಾನ ಕಲಾವಿದರೂ ಹೌದು.ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದು ಸೂಡ ಮಯೂರ ವಾಹನ ಯಕ್ಷಗಾನ ಮೇಳದಲ್ಲಿ  ಸಕ್ರಿಯರಾಗಿದ್ದಾರೆ.ಕಿನ್ನಿಗೋಳಿ‌ ರೋಟರಿ‌ ಸದಸ್ಯರಾಗಿರುವ ರಾಜೇಶ್ ವಿವಿಧ ಸಂಘ ಸಂಸ್ಥೆಗಳಲ್ಲಿ‌ ಪದಾಧಿಕಾರಿಯಾಗಿ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನಪ್ರಿಯರಾಗಿದ್ದಾರೆ.