ಪ್ರಿಯದರ್ಶಿನಿ ಕಿನ್ನಿಗೋಳಿ ಶಾಖೆಯ ಎರಡನೇ ವಾರ್ಷಿಕೋತ್ಸವ- ಹೊಲಿಗೆ ಯಂತ್ರ ವಿತರಣೆ
ಕಿನ್ನಿಗೋಳಿ:ಬಡವರಿಗೆ ಸಹಕಾರಿ ಬ್ಯಾಂಕುಗಳು ಜನಸ್ನೇಹಿ ಯಾಗಿದ್ದು, ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯು ಅಧ್ಯಕ್ಷರಾದ ಎಚ್ ವಸಂತ್ ಬೆರ್ನಾಡ್ ನೇತೃತ್ವದಲ್ಲಿ ಅಸಹಾಯಕರಿಗೆ ಸಹಾಯ ಹಸ್ತದಂತಹ ಅನೇಕ ಸಮಾಜಮುಖಿ ಕಾರ್ಯಕ್ರಮಗಳು ನಡೆಸುತ್ತಿರುವುದು ಶ್ಲಾಘನೀಯವಾಗಿದ್ದು ನಿರಂತರವಾಗಿ ನಡೆಯಲಿ ಎಂದು ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಹೇಳಿದರು.ಅವರು ಪ್ರಿಯದರ್ಶಿನಿ ಕೋ ಅಪರೇಟಿವ್ ಸೊಸೈಟಿ ಹಳೆಯಂಗಡಿ ಇದರ ಕಿನ್ನಿಗೋಳಿ ಶಾಖೆಯ ಎರಡನೇ ವರ್ಷದ ವಾರ್ಷಿಕೋತ್ಸವ ಹಾಗೂ ಕಿನ್ನಿಗೋಳಿ ಸೈಂಟ್ ಮೇರಿಸ್ ಸ್ಪೆಷಲ್ ಸ್ಕೂಲ್ ನ ವಿದ್ಯಾರ್ಥಿಗಳಿಗೆ ಹೊಲಿಗೆ ಯಂತ್ರಗಳನ್ನು ಕಿನ್ನಿಗೋಳಿ ಶಾಖೆಯ ಆವರಣದಲ್ಲಿ ಎ.17 ರಂದು ವಿತರಿಸಿ ಮಾತನಾಡಿದರು.
ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್ ವಸಂತ್ ಬೆರ್ನಾಡ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯು ಕಳೆದ ಐದು ವರ್ಷಗಳಿಂದ ಸಹಕಾರಿ ಧುರೀಣ ದಿ.ನಾರಾಯಣ ಸನಿಲ್ ಹಾಗೂ ಪಂಜದ ಗುತ್ತು ದಿ.ಶಾಂತರಾಮ ಶೆಟ್ಟಿ ರವರ ಪ್ರೇರಣೆಯಿಂದ ಆರಂಭಗೊಂಡಿದ್ದು 38 ಕೋಟಿ ಠೇವಣಿ ಹೊಂದಿದೆ. ಮಾಜೀ ಸಚಿವ ಕೆ ಅಭಯ ಚಂದ್ರ ಜೈನ್ ರವರ ಸಹಕಾರದಿಂದ ಸೊಸೈಟಿ ಈಗಾಗಲೇ ನಾಲ್ಕು ಶಾಖೆಗಳನ್ನು ಹೊಂದಿದ್ದು, ಆರ್ಥಿಕವಾಗಿ ಸಹಾಯ ಹಸ್ತ , ಉದ್ಯೋಗ ಸೃಷ್ಟಿ ಹಾಗೂ ಗ್ರಾಹಕರ ಸಹಕಾರದಿಂದ ಸೊಸೈಟಿಯು ಯಶಸ್ಸು ಸಾಧಿಸಿದೆ ಎಂದು ಹೇಳಿದರು.
ಈ ಸಂದರ್ಭ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯೆ ಕೋಕಿಲ ಡಿ ಅಮೀನ್, ಕಿನ್ನಿಗೋಳಿ ಸೈಂಟ್ ಮೇರಿಸ್ ಸ್ಪೆಷಲ್ ಸ್ಕೂಲ್ ನ ಮುಖ್ಯೋಪಾಧ್ಯಾಯಿನಿ
ರೇಷ್ಮಾ ಮಾರ್ಟಿನ್ , ಸೊಸೈಟಿ ಉಪಾಧ್ಯಕ್ಷ ವಿಜಯಕುಮಾರ್ ಸನಿಲ್, ನಿರ್ದೇಶಕರುಗಳಾದ ಗಣೇಶ್ ಪ್ರಸಾದ್ ದೇವಾಡಿಗ, ರೇಖಾ ಶೆಟ್ಟಿ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ, ಶಾಖಾ ಪ್ರಭಂದಕಿ ಅಕ್ಷತಾ ಶೆಟ್ಟಿ ,ಸಿಬ್ಬಂದಿಗಳಾದ ಕ್ಯಾರಲ್ ಡಿಸೋಜಾ, ದೀಪಕ್ ಸಾಲ್ಯಾನ್,ರೇಷ್ಮಾ ಮತ್ತಿತರರು ಉಪಸ್ಥಿತರಿದ್ದರು
ಕಾರ್ಯನಿರ್ವಣಾಧಿಕಾರಿ ಸುದರ್ಶನ್ ಪೂಜಾರಿ ಧನ್ಯವಾದವಿತ್ತರು.ಪ್ರಬಂಧಕಿ ಅಕ್ಷತಾ ಶೆಟ್ಟಿ ನಿರೂಪಿಸಿದರು.