Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಎ.24 - 27 :ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ

ಕಿನ್ನಿಗೋಳಿ: ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅತ್ತೂರು, ಕೆಮ್ರಾಲ್, ಕಿಲೆಂಜೂರು ಇಲ್ಲಿನ ವಾರ್ಷಿಕ ಜಾತ್ರಾ ಮಹೋತ್ಸವ ಎ. 24 ರಿಂದ ಎ.27 ರವರೆಗೆ ನಡೆಯಲಿದೆ.ಎ. 24 ರಂದು ಧ್ವಜಾರೋಹಣ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಎ. 26 ರಂದು ಮದ್ಯಾಹ್ನ ರಥೋತ್ಸವ, ಮಹಾಪೂಜೆ ಅನ್ನಸಂತರ್ಪಣೆ, ರಾತ್ರಿ ಕವಾಟಬಂಧನ, ಎ. 27 ರಂದು ಕವಾಟೋದ್ಘಾಟನೆ, ರಾತ್ರಿ ರಥೋತ್ಸವ ನಡೆಯಲಿದ್ದು ಪ್ರತೀ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮದ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ.