Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಎ.17: ಪ್ರಿಯದರ್ಶಿನಿ ಕೋ ಅಪರೇಟಿವ್ ಸೊಸೈಟಿ ಕಿನ್ನಿಗೋಳಿ ಶಾಖೆಯಿಂದ ಹೊಲಿಗೆ ಯಂತ್ರ ವಿತರಣೆ

ಕಿನ್ನಿಗೋಳಿ :  ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿ ಹಳೆಯಂಗಡಿ ಇದರ  ಕಿನ್ನಿಗೋಳಿ ಶಾಖೆಯ 2ನೇ  ವರ್ಷದ ವಾರ್ಷಿಕೋತ್ಸವ ಹಾಗೂ ಕಿನ್ನಿಗೋಳಿ ಸೈಂಟ್ ಮೇರಿಸ್ ಸ್ಪೆಷಲ್ ಸ್ಕೂಲ್ ನ ವಿದ್ಯಾರ್ಥಿಗಳಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮವು  ಎ .17ರಂದು ಬೆಳಿಗ್ಗೆ 10 ಗಂಟೆಗೆ ಕಿನ್ನಿಗೋಳಿ ಶಾಖೆಯ  ಆವರಣದಲ್ಲಿ ನಡೆಯಲಿದೆ.
 ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಸದಸ್ಯರಾದ ಕೋಕಿಲ ಡಿ ಅಮೀನ್, ರೇಷ್ಮಾ ಮಾರ್ಟಿನ್ ಮೊದಲಾದವರು ಉಪಸ್ಥಿತರಿರುವರು ಎಂದು ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ  ಅಧ್ಯಕ್ಷ ಎಚ್ ವಸಂತ್  ಬೆರ್ನಾಡ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.