ಕಿನ್ನಿಗೋಳಿ ಸಮೀಪದ ಕೊಲ್ಲೂರು ಪದವು ಎಂಬಲ್ಲಿ ಗುಡ್ಡಕ್ಕೆ ಆಕಸ್ಮಿಕ ಬೆಂಕಿ
ಕಿನ್ನಿಗೋಳಿ ಸಮೀಪದ ಕೊಲ್ಲೂರು ಪದವು ಎಂಬಲ್ಲಿ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ಆವರಿಸಿಕೊಂಡಿರುವ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.ಗುಡ್ಡಕ್ಕೆ ಬೆಂಕಿ ಆವರಿಸಿದ ಪರಿಣಾಮ ಹಲವು ಮರಗಳು ಸುಟ್ಟುಹೋಗಿದೆ.ಪ್ರದೇಶವು ಸಂಪೂರ್ಣ ಹೊಗೆಯಿಂದ ಆವರಿಸಿದ್ದರಿಂದ ಸಮೀಪದ ರಸ್ತೆಯಲ್ಲಿ ಹೋಗುತ್ತಿರುವ ವಾಹನಗಳ ಸವಾರರು ಪರದಾಡುವಂತಾಯಿತು.ಸ್ಥಳಕ್ಕೆ ಅಗ್ನಿಶಾಮಕದಳ ಆಗಮಿಸಿ ಬೆಂಕಿಯನ್ನು ನಂದಿಸಿದರು.ಸ್ಥಳೀಯರು ಕೂಡ ಕಾರ್ಯಕ್ಕೆ ಸಾಥ್ ನೀಡಿದ್ದರು.ಕೆಲ ದಿನಗಳ ಹಿಂದೆಯೂ ಸಮೀಪದಲ್ಲಿನ ಗುಡ್ಡವೊಂದಕ್ಕೆ ಬೆಂಕಿ ಆವರಿಸಿ ಎಕರೆಗಟ್ಟಲೆ ಮರಗಳು ಸುಟ್ಟುಹೋಗಿದ್ದವು.