ನಡುಗೋಡು ವಾರ್ಡ್ 4ರಲ್ಲಿ ಹೈಮಾಸ್ಕ್ ದೀಪದ ಉದ್ಘಾಟನೆ
ಕಿನ್ನಿಗೋಳಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ನಡುಗೋಡು ವಾರ್ಡ್ 4ರಲ್ಲಿ ಹೈಮಾಸ್ಕ್ ದೀಪದ ಉದ್ಘಾಟನೆಯನ್ನು ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ನೆರವೇರಿಸಿದರು.
ಈ ಸಂಧರ್ಭ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಉಪಾಧ್ಯಕ್ಷೆ ಪದ್ಮಲತಾ ರಾವ್, ಸದಸ್ಯರಾದ ದಾಮೋದರ ಶೆಟ್ಟಿ ಕೊಡೆತ್ತೂರು, ಪ್ರಕಾಶ್ ಆಚಾರ್ಯ, ಮಲ್ಲಿಕಾ ಆಚಾರ್ಯ, ಶೈಲೇಶ್ ಅಂಚನ್, ಈಶ್ವರ್ ಕಟೀಲ್, ಅಭಿಲಾಷ್ ಶೆಟ್ಟಿ ಕಟೀಲ್, ಭುವನಾಭಿರಾಮ ಉಡುಪ, ಜಯರಾಮ ಮುಕ್ಕಾಲ್ದಿ, ದೇವಿಪ್ರಸಾದ್ ಶೆಟ್ಟಿ , ಕೇಶವ ಕರ್ಕೇರ, ಮತ್ತು ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.