Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಂಜದಗುತ್ತು ಶಾಂತಾರಾಮ ಶೆಟ್ಟಿ, ಸರಕಾರಿ ಪ್ರೌಢಶಾಲೆ ಕೆಮ್ರಾಲ್ 100 ಶೇ. ಫಲಿತಾಂಶ

ಕಿನ್ನಿಗೋಳಿ:ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಂಜದ ಗುತ್ತು ಶಾಂತಾರಾಮ ಶೆಟ್ಟಿ ಸರಕಾರಿ ಪ್ರೌಢಶಾಲೆಯಿಂದ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಸಂಸ್ಥೆಗೆ  100 ಶೇ. ಫಲಿತಾಂಶ ದಾಖಲಿಸಿದೆ ಎಂದು  ಶಾಲಾ  ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಶರ್ಲಿ ಸುಮಾಲಿನಿಯವರು ತಿಳಿಸಿದ್ದಾರೆ.

 ಸಮೀಕ್ಷಾ 588 (94.08)ಅಂಕಗಳನ್ನು ಪಡೆದು ಸಂಸ್ಥೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಉಳಿದಂತೆ  ಕಿರಣ್ (88.64 ) ಪೂರ್ವಿ (87.52 ) ರಿಷಿಕ್( 86.72 ) ಸಂಜಯ್ (85.12)  ಅನುಷ್ಕಾ (85)
6 ವಿದ್ಯಾರ್ಥಿಗಳು  ವಿಶಿಷ್ಟ ಶ್ರೇಣಿಯಲ್ಲಿ, 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಸಂಸ್ಥೆಯ ಗುಣಮಟ್ಟದ ಫಲಿತಾಂಶ " ಎ" ಆಗಿದ್ದು 89.33 ಆಗಿರುತ್ತದೆ.

 ಉತ್ತಮ ಫಲಿತಾಂಶಕ್ಕೆ ಕಾರಣರಾದ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಾದ ಮಂಜುಳಾ ಶೆಟ್ಟಿ, ರಶ್ಮಿ ಅಮೀನ್, ಭವ್ಯ, ಕಾವ್ಯಶ್ರೀ, ಸುಮಾ, ದೈಹಿಕ ಶಿಕ್ಷಕರಾದ ಡೇವಿಡ್ ಧರ್ಮಪಾಲ್ ಇವರನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಭಾಕರ್ ಹಾಗೂ ಸದಸ್ಯರು ಅಭಿನಂದಿಸಿದ್ದಾರೆ.