ಎ.30:ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ)ಕಿನ್ನಿಗೋಳಿ ಘಟಕದ ಪ್ರಥಮ ವಾರ್ಷಿಕೋತ್ಸವ,ಕಲಾವಿದರಿಗೆ ಸನ್ಮಾನ ಆಶಕ್ತ ಕಲಾವಿದರಿಗೆ ನೆರವು,ಸಾಧಕರಿಗೆ ಸನ್ಮಾನ
ಕಿನ್ನಿಗೋಳಿ:ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ) ಮಂಗಳೂರು ಇದರ ಕಿನ್ನಿಗೋಳಿ ಘಟಕದ ಪ್ರಥಮ ವಾರ್ಷಿಕೋತ್ಸವವು ಇಂದು ಕಿನ್ನಿಗೋಳಿ ಬಸ್ ನಿಲ್ದಾಣದ ಬಳಿಯಲ್ಲಿ ಸಂಜೆ 6 ರಿಂದ ನಡೆಯಲಿದೆ.ಸಂಜೆ 8 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು,ಕಟೀಲು ದೇವಳದ ಅನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಅವರು ಆಶೀರ್ವಚನ ನೀಡಲಿದ್ದಾರೆ.ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಳಕುಂಜ ಕಂಬಳ ಸಮಿತಿ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಯಶವಂತ ಶೆಟ್ಟಿ,ಧನಪಾಲ್ ಶೆಟ್ಟಿ ತಾಳಿಪಾಡಿಗುತ್ತು,ಎಂ.ಅರ್.ಪಿ.ಎಲ್ ನ ಜನರಲ್ ಮ್ಯಾನೇಜರ್ ಸತೀಶ್ ಎಂ,ಕಿನ್ನಿಗೋಳಿ ಪಟ್ಟನ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ,ದ.ಕ ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕುಶಲಪೂಜಾರಿ ಗುತ್ತಕಾಡು ಹಾಗೂ ಮೊದಲಾದವರು ಉಪಸ್ಥಿತಲಿರುವರು.
ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ)ಕೇಂದ್ರೀಯ ಸಮಿತಿ ಮಂಗಳೂರು ಇದರ ಪ್ರಧಾನ ಸಂಚಾಲಕ ಶಶಿಧರ್ ಬಿ.ಶೆಟ್ಟಿ ಬರೋಡಾ,ಯಕ್ಷಗಾನ ಹಾಗೂ ತಾಳಮದ್ದಳೆ ಅರ್ಥಧಾರಿ ಶ್ರೀಧರ ಕೊಕ್ಕಾರಗುತ್ತು,ಪಾವಂಜೆ ಮೇಳದ ಹಾಸ್ಯ ಕಲಾವಿದ ಸಂದೇಶ ಮಂದಾರ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಲಿರುವರು.
ಕಾರ್ಯಕ್ರಮದಲ್ಲಿ ಕಲಾವಿದರಿಗೆ ಸನ್ಮಾನ,ಆಶಕ್ತ ಕಲಾವಿದರಿಗೆ ನೆರವು,ಸಾಧಕರಿಗೆ ಸನ್ಮಾನ ಹಾಗೂ ಶ್ರೀ ಜ್ಷಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಶ್ರೀ ದೇವಿ ಮಹಾತ್ಮ್ಯೆ ಎಂಬ ಯಕ್ಷಗಾನ ನಡೆಯಲಿದೆ.