Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮೇ 3ರಂದು ಕೆರೆಕಾಡು ಸಾದಾತ್ ವಲಿಯ್ಯ್ ಝಿಕ್ರ್ ಸ್ವಲಾತ್ ಮಜ್ಲಿಸ್ ನಿಂದ 22ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ


ಮುಲ್ಕಿ: ಸಾದಾತ್ ಮದಾರಿ ಫೌಂಡೇಶನ್ (ರಿ‌), ಸಾದಾತ್ ವಲಿಯ್ಯ್ ಝಿಕ್ರ್ ಸ್ವಲಾತ್ ಮಜ್ಲಿಸ್ ಕೆರೆಕಾಡು ಮುಲ್ಕಿ ಇದರ 22ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮವು ಮೇ 3ರ ಭಾನುವಾರ ಕೆರೆಕಾಡಿನ ಝಿಕ್ರ್ ಮಜ್ಲಿಸ್ ವಠಾರದ ಅಬ್ದುಲ್ ಜಬ್ಬಾರ್ ಉಪ್ಪಾಪ ಮೂಳೂರು ವೇದಿಕೆಯಲ್ಲಿ ಜರುಗಲಿದೆ.

ಸುಬಹಿ ನಮಾಝಿನ‌ ಬಳಿಕ ವಲಿಯುದ್ದೀನ್ ಫೈಝಿ ವಾಝಕ್ಕಾಡ್ ಅವರ ನೇತೃತ್ವದಲ್ಲಿ ಆಧ್ಯಾತ್ಮಿಕ ನೂರೆ ಅಜ್ಮೀರ್ ಅಝ್ಕಾರು ಸ್ವಬಾಹ್ ನಡೆಯಲಿದ್ದು, ಬೆಳಗ್ಗೆ 9 ಗಂಟೆಗೆ ಶ್ರೀನಿವಾಸ್ ಆಸ್ಪತ್ರೆ ಮುಕ್ಕ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇವುಗಳ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ಮಧ್ಯಾಹ್ನ 2ರಿಂದ ಮಂಗಳುರಿನ ಮಖ್ದೂಮಿಯಾ ಬುರ್ದಾ ತಂಡದಿಂದ ಬುರ್ದಾ ಮಜ್ಲಿಸ್ ಜರುಗಲಿದ್ದು, ಸಾದಾತ್ ಮದಾರಿ ಫೌಂಡೇಶನ್ ಸ್ಥಾಪಕರಾದ ಮುಹಮ್ಮದ್ ಶಾಫಿ ಮದಾರಿ ಕೆರೆಕಾಡು ಉದ್ಘಾಟಿಸಲಿದ್ದಾರೆ.

ಸಂಜೆ 4 ಗಂಟೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಸೌಹಾರ್ದ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಲ್ಕಿ ‌ಅಂಗರಗುಡ್ಡೆ ಜುಮ್ಮಾ ಮಸೀದಿಯ ಖರೀಬರಾದ ಅಸ್ಸೈಯ್ಯದ್ ಹಬೀಬ್ ರಹ್ಮಾನ್ ತಂಙಳ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಲ್ ಹಾಜ್ ಅಝ್ಹರ್ ಫೈಝಿ ಬೊಳ್ಳೂರು ಉಸ್ತಾದ್‌ ವಹಿಸಲಿದ್ದಾರೆ. ಸಮಸ್ತ ಕೇಂದ್ರ ಮುಷಾವರ ಸದಸ್ಯರಾದ ಉಸ್ಮಾನ್ ಫೈಝಿ ತೋಡಾರು ದುಆ ನೆರವೇರಿಸಲಿದ್ದಾರೆ. ಸಮಸ್ತ ಕೇಂದ್ರ ಮುಷಾವರ ಸದಸ್ಯರಾದ ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ನಿಖಾಹ್‌ ಗೆ ನೇತೃತ್ವ ನೀಡಲಿದ್ದಾರೆ. ಚೊಕ್ಕಬೆಟ್ಟು ಜುಮಾ ಮಸೀದಿಯ ಖತೀಬ್‌ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮುಖ್ಯ ಪ್ರಭಾಷಣಾ ಗೈಯ್ಯಲಿದ್ದಾರೆ. ಕಾಪು ಹಝ್ರತ್ ಸಾದಾತ್ ಜುಮ್ಮಾ ಮಸೀದಿಯ ಖತೀಬ್‌ ತ್ವಯ್ಯಿಬ್ ಫೈಝಿ ಬೊಳ್ಳೂರು ಸ್ವಾಗತಿಸಲಿದ್ದಾರೆ. ಸಮಾರಂಭದ ವೇದಿಕೆಯಲ್ಲಿ ಮುಲ್ಕಿ ಕೊಲ್ನಾಡು ಶಾಫಿ ಜುಮಾ ಮಸೀದಿಯ ಖತೀಬ್‌ ಷರೀಫ್ ದಾರಿಮಿ ಅಲ್ ಹೈತಮಿ, ಎಸ್ ಕೋಡಿ ಮಸ್ಜಿದ್ ಅಲ್ ಇಖ್ಲಾಸ್ ಜುಮಾ ಮಸೀದಿಯ ಖತೀಬ್‌ ಉಮರುಲ್ ಫಾರೂಕ್ ಸಖಾಫಿ ಸೇರಿದಂತೆ, ಧಾರ್ಮಿಕ, ಸಾಮಾಜಿಕ, ರಾಜಕೀಯ ನೇತಾರರು ಉಲಮಾ-ಉಮರಾಗಳು ಭಾಗಹಿಸಲಿದ್ದಾರೆ.

ಮಗ್ರಿಬ್ ನಮಾಝಿನ ಬಳಿಕ ಅಸ್ಸೈಯ್ಯದ್ ಯಹ್ಯಲ್ ಬುಖಾರಿ ತಂಙಳ್ ಮಡವೂರು ಕೋಟ‌ ಇವರ ನೇತೃತ್ವದಲ್ಲಿ ಶಾಝೂಲಿ ರಾತೀಬ್ ಜರುಗಲಿದೆ ಎಂದು ಸಾದಾತ್ ಮದಾರಿ ಫೌಂಡೇಶನ್ ಸ್ಥಾಪಕಾಧ್ಯಕ್ಷರಾದ ಮುಹಮ್ಮದ್ ಶಾಫಿ ಮದಾರಿ ಕೆರೆಕಾಡು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.