ಕಟೀಲು ಜಾತ್ರೆ ಆರಂಭ,ಧ್ವಜಾರೋಹಣ
ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಎ.14 ರಂದು ಮೊದಲ್ಗೊಂಡು ಎ.21 ರ ತನಕ ವರ್ಷಾವಧಿ ಜಾತ್ರೆಯು ವಿಜೃಂಭಣೆಯಿಂದ ಜರುಗಲಿದೆ.ವರ್ಷಾವಧಿ ಜಾತ್ರೆಯ ಅಂಗವಾಗಿ ಎ.14 ರ ಮಂಗಳವಾರದಂದು ಬೆಳಿಗ್ಗೆ ಕ್ಷೇತ್ರದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಶ್ರೀದೇವರ ಧ್ವಜಾರೋಹಣ ನೆರವೇರಿತು.
ದೈವ ದೇವರ ದರ್ಶನದ ಬಳಿಕ ಮಹಾಪೂಜೆ ನಡೆಯಿತು. ಸ್ಥಳೀಯ ನೂರಾರು ಮಂದಿ ಪಾನಕ ಪ್ರಸಾದವನ್ನು ಸ್ವೀಕರಿಸಿ, ಮನೆಗಳಿಗೂ ಕೊಂಡೊಯ್ದರು. ಸರಸ್ವತೀ ಸದನದಲ್ಲಿ ದಿನವಿಡೀ ಭಜನೆ, ಭರತನಾಟ್ಯ, ಸಂಗೀತ ಹೀಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾತ್ರಿ ಬಲಿ, ರಾಜಾಂಗಣ ಪ್ರಸಾದ ವಿತರಣೆ, ಚಿನ್ನದ ರಥ ಉತ್ಸವ, ಬೆಳ್ಳಿ ಪಲ್ಲಕಿ ಉತ್ಸವ, ವಸಂತ ಮಮಟಪ ಪೂಜೆ ಅಷ್ಟಾವಧಾನ ನಡೆಯಿತು. ಎ.15 ರಂದು ಮುಂಜಾನೆ ಯುಗಾದಿ ವಿಷು ದೀಪದ ಬಲಿ, ರಾತ್ರಿ ಉತ್ಸವ ಬಲಿ, ಪಂಚಾಂಗ ಪೂಜೆ, ಪಠನ ನಡೆಯಲಿದೆ.
ಸಂದರ್ಭ ದೇವಸ್ಥಾನದ ಅರ್ಚಕ ವೃಂದ, ಆಡಳಿತ ಮಂಡಳಿಯ ಪ್ರಮುಖರುಗಳು ಭಕ್ತರು ಉಪಸ್ಥಿತರಿದ್ದರು.