Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲು ವರ್ಷಾವಧಿ ಜಾತ್ರೆ ,ಹೊರೆ ಕಾಣಿಕೆ ಸಮರ್ಪಣೆ

ಕಟೀಲು:ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೆಯು  ಎ.14ರಂದು ಧ್ವಜಾರೋಹಣದೊಂದಿಗೆ ಆರಂಭಗೊಳ್ಳಲಿದ್ದು, ವರ್ಷಾವಧಿ ಜಾತ್ರೆಯ ಅಂಗವಾಗಿ ಸಿತ್ಲ ಹಾಗೂ ಗಿಡಿಗೆರೆ ಗ್ರಾಮಸ್ಥರಿಂದ ಹೊರೆಕಾಣಿಕೆಯ ಸಮರ್ಪಣೆಯ ನಡೆಯಿತು. ಮಂಗಳವಾರ ಸಿತ್ತ ಹಾಗೂ ಗಿಡಿಗೆರೆಗಳಿಂದ ಗ್ರಾಮಸ್ಥರು ಹೊರೆ ಕಾಣಿಕೆ ಸಮರ್ಪಿಸಿದರು. ಬಳಿಕ ಅನ್ನ ಪ್ರಸಾದಕ್ಕೆ ತರಕಾರಿ ಹಚ್ಚುವ ಕಾರ್ಯಕ್ಕೆ   ಚಾಲನೆ ನೀಡಲಾಯಿತು.

ಸೋಮವಾರ ರಾತ್ರಿ ಅಂಕುರ ಬಲಿ, ಅಂಕುರಾರೋಪಣ ನಡೆಯಿತು. ಎ.14 ಮಂಗಳವಾರ ಬೆಳಿಗ್ಗೆ 10 ಕ್ಕೆ  ಧ್ವಜಾರೋಹಣ ನಡೆಯಲಿದೆ.ರಾತ್ರಿ ಉತ್ಸವ ಬಲಿ ನಡೆಯಲಿದೆ.