Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲು ಉತ್ಸವಾಂಗ ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳು

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ತಾ. 14 ರಿಂದ ವರ್ಷಾವಧಿ ಮಹೋತ್ಸವ ನಡೆಯಲಿದ್ದು, ತಾ. 21 ರ ಆರಾಟದವರೆಗೆ ದಿನಂಪ್ರತಿ ಬೆಳಿಗ್ಗೆ ಗಂಟೆ 9 ರಿಂದ ರಾತ್ರಿಯವರೆಗೆ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸರಸ್ವತೀ ಸದನದಲ್ಲಿ ನಡೆಯಲಿವೆ.
ತಾ. 14 ರಂದು ಪೂಜಾಶ್ರೀ ಮುಕ್ಕ ಹಾಗೂ ಸಂಜೀವಿನಿ ಕಲಾ ಟ್ರಸ್ಟ್ ಬೆಂಗಳೂರು ಇವರಿಂದ ಭರತನಾಟ್ಯ, ತಾ. 15 ರಂದು ವೈನವಿ ಮತ್ತು ಬಳಗ, ಬೆಂಗಳೂರು ಇವರಿಂದ ಕೊಳಲುವಾದನ, ಸುಮಲತಾ ಪ್ರಶಾಂತ್ ಉಡುಪಿ, ಮನೋಜ್ಞ ಎ. ಬೆಂಗಳೂರು ಇವರಿಂದ ಭರತನಾಟ್ಯ, ತಾ.16 ರಂದು ವಿ| ಡಿ. ನಾಗವೇಣಿ ಲಲಿತ ನೃತ್ಯ ಕಲಾ ಮಂದಿರ ಬೆಂಗಳೂರು, ವಿ| ಸೌಮ್ಯ ಪ್ರದೀಪ್ ಹೆಗಡೆ ಮೈತ್ರಿ ನೃತ್ಯ ಕಲಾ ಟ್ರಸ್ಟ್, ಶಿರಸಿ, ವಿ| ಅಮೃತ ನರೇಶ್‌ರಾವ್, ಬೆಂಗಳೂರು ಇವರಿಂದ ಭರತನಾಟ್ಯ, ರಾಧಿಕಾ ಎಸ್. ಕಾರಂತ್ ಬೆಂಗಳೂರು ಇವರಿಂದ ಸಂಗೀತ, ತಾ. 17 ರಂದು ವಿ| ನಂದಿನಿ ಕೆ. ವಿ ಕಲಾ ಸಂಗಮ ಬೆಂಗಳೂರು, ಶ್ರೀವಿದ್ಯಾ ಶಶಿಧರ್ ಶ್ರೀ ದುರ್ಗಾ ನೃತ್ಯಅಕಾಡೆಮಿಚಾರಿಟೇಬಲ್ ಟ್ರಸ್ಟ್ ಮೈಸೂರು ಇವರಿಂದ ಭರತನಾಟ್ಯ, ಗಣೇಶ್ ನವಗಿರಿ ಹೊಸಬೆಟ್ಟು ಮಂಗಳೂರು ಇವರಿಂದ ಸಂಗೀತ, ತಾ. 18 ರಂದು ವೈಶ್ಣವಿ ನಾಟ್ಯಾಶಾಲಾ ಬಾನಸವಾಡಿ, ಬೆಂಗಳೂರು, ವಿ| ಸೌದಾಮಿನಿ ರಾವ್ ಬೆಂಗಳೂರು, ವಿ| ಧನ್ಯಶ್ರೀ ಪಿ.ಎನ್. ಧನ್ಯಶ್ರೀ ನೃತ್ಯ ಕಲಾ ನಿಕೇತನ (ರಿ), ಬೆಂಗಳೂರು ಇವರಿಂದ ನಾಟ್ಯ, ತಾ.19 ರಂದು ವಿಶಾಲ ಯಕ್ಷಕಲಾ ಮಂಡಳಿ, ನಂದಳಿಕೆ ಇವರಿಂದ ತಾಳಮದ್ದಲೆ, ಉಮಾರಾಮಚಂದ್ರನ್ ಬೆಂಗಳೂರು ಇವರಿಂದ ಸಂಗೀತ, ವಿ| ಶೈಲಶ್ರೀ ಶ್ರೀವತ್ಸ, ನಾಟ್ಯಶೈಲಿ ನೃತ್ಯ ಸಂಸ್ಥೆ ಬೆಂಗಳೂರು ಇವರಿಂದ ಭರತನಾಟ್ಯ, ಶರತ್ ಹಳೆಯಂಗಡಿ ಇವರಿಂದ ಗಿಟಾರ್ ವಾದನ, ತಾ.20 ರಂದು ದುರ್ಗಾಮಕ್ಕಳ ಮೇಳದವರಿಂದ ಯಕ್ಷಗಾನ, ತಾ. 21 ರಂದು ಸಂಜೆ ಕೀರ್ತನ್ ಹೊಳ್ಳ ಬಳಗದವರಿಂದ ಭಕ್ತಿ ಸಂಗೀತ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.