ಕಟೀಲು ಪದವಿ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಪ್ರಶಸ್ತಿ ಪ್ರದಾನ ನಡೆಯಿತು.
ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಗೀತಾ ಎಂ.ಎಲ್. ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಜನೆ ಮತ್ತು ಪ್ರಶಸ್ತಿಗಳನ್ನು ಗಳಿಸುವುದರ ಜೊತೆಗೆ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಸಂಸ್ಥೆಯ ನಿವೃತ್ತ ಹಿಂದಿ ಉಪನ್ಯಾಸಕಿ ಡಾ. ಸುನೀತಾ ಎಚ್.ಬಿ. ಮತ್ತು ನಿವೃತ್ತ ಗ್ರಂಥಪಾಲಕ ಗಣೇಶ್ ದೇವಾಡಿಗ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಸಂಸ್ಥೆಯ ನಿವೃತ್ತ ಕಛೇರಿ ಅಧೀಕ್ಷಕಿ ಶ್ರೀಮತಿ ಮಲ್ಲಿಕಾ ಮಣಿ ಮತ್ತು ಸಾಧನೆ ಮಾಡಿದ ವಿದ್ಯಾರ್ಥಿನಿಯರಾದ ವಿಶ್ರುತಾ, ಪೃಥ್ವಿ ಹೆಚ್. ಪೂಜಾರಿ, ಶ್ರಾವ್ಯಾ ಕೆ., ಶ್ರೇಯಾ, ಶಮಿತಾ ಮತ್ತು ಪ್ರೀತಿ ಇವರುಗಳನ್ನು ಸನ್ಮಾನಿಸಲಾಯಿತು.
ದೇವಳದ ಅನುವಂಶಿಕ ಅರ್ಚಕರಾದ ಸದಾನಂದ ಅಸ್ರಣ್ಣ, ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಭಾರತಿ ಭಟ್, ಕಾಲೇಜಿನ ಪ್ರಾಂಶುಪಾಲ ಡಾ. ವಿಜಯ್ ವಿ., ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾರ್ತಿಕ್ ಎಸ್. ನಾಯ್ಕ್, ಉಪಾಧ್ಯಕ್ಷ ತರುಣ್ ದೇವಾಡಿಗ, ಕಾರ್ಯದರ್ಶಿ ಕೃಪಾ ಟಿ. ಶೆಟ್ಟಿ ಮತ್ತು ಜತೆ ಕಾರ್ಯದರ್ಶಿ ಪ್ರಾರ್ಥನಾ ಉಪಸ್ಥಿತರಿದ್ದರು. ಉಪನ್ಯಾಸಕರಾದ ಕುಮಾರಿ ಗ್ರೀಷ್ಮಾ ರೈ ಸ್ವಾಗತಿಸಿದರು. ಕುಮಾರಿ ಹರಿಣಾಕ್ಷಿ ವಂದಿಸಿದರು. ನವ್ಯಶ್ರೀ ಮತ್ತು ಚಿತ್ರಾಂಸಿ ನಿರೂಪಿಸಿದರು.