ಕಟೀಲು ಕೆ. ಎಮ್. ಸಿ. ಯಲ್ಲಿ ಹೆಚ್ಚುವರಿ ಆರೋಗ್ಯ ಸೇವೆ ಉದ್ಘಾಟನೆ
ಕಟೀಲು:ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ ಕಟೀಲು (ಮಣಿಪಾಲ ವಿಶ್ವ ವಿದ್ಯಾಲಯದ ಅಂಗ ಸಂಸ್ಥೆ ) ಗ್ರಾಮೀಣ ಭಾಗದಲ್ಲಿ ಜನರಿಗೆ ಆಧುನಿಕ ಮಾದರಿಯ ಚಿಕಿತ್ಸೆ ನೀಡುತ್ತಿರುವ ಕಟೀಲು ಕೆ ಎಮ್ ಸಿ ಆಸ್ಪತ್ರೆ ಎಲುಬು ಮತ್ತು ಕೀಲು ವಿಭಾಗದಲ್ಲಿ 500 ಕ್ಕೂ ಹೆಚ್ಚಿನ ಉನ್ನತ ಮಟ್ಟದ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ್ದು ಆಧುನಿಕ ಮಾದರಿಯ ಶಸ್ತ್ರ ಚಿಕಿತ್ಸೆಗೆ ದುಬಾರಿ ಬೆಲೆಯ ಅರ್ಥ್ತ್ರೋಸ್ಕೋಪಿ ಯಂತ್ರದ ಉದ್ಘಾಟನೆ ನಡೆಯಿತು.
ಮಣಿಪಾಲ ವಿಶ್ವವಿದ್ಯಾಲಯದ ಸಿ. ಇ.ಓ ಡಾ ಆನಂದ್ ವೇಣುಗೋಪಾಲ್ ,ಮಂಗಳೂರು ಮಾಹೆಯ ಉಪ ಕುಲಪತಿ ಡಾ. ದಿಲೀಪ್ ನಾಯ್ಕ್ ,ಕಟೀಲು ಕೆ. ಎಮ್. ಸಿ ಆಸ್ಪತ್ರೆಯ ಮುಖ್ಯಸ್ಥ ಡಾ. ಶಿವಾನಂದ ಪ್ರಭು, ಸಾಮಾನ್ಯ ರೋಗ ತಜ್ಞವೈದ್ಯ ಡಾ ನಿತ್ಯಾನಂದ ಚೌಟ,ಡಾ ಕೌಶಿಕ್. ಎಸ್.ಆರ್ ಎಲುಬು ತಜ್ಞ ವೈದ್ಯ ಡಾ ಸುಧೀಂದ್ರ ಕಾರ್ನಾಡ್ ,ಕೆ. ಎಮ್. ಸಿ. ಕಟೀಲು ಪ್ರಬಂಧಕ ನಿತೇಶ್ ಶೆಟ್ಟಿ ಎಕ್ಕಾರು, ಪ್ರೀತೇಶ್ ಸಾಲಿಯಾನ್ ಉಪಸ್ಥಿತರಿದ್ದರು.