ಕಟೀಲಿನಲ್ಲಿ ಹಿಂದೂ ಧಾರ್ಮಿಕ ಶಿಬಿರ ಉದ್ಘಾಟನೆ
ಕಟೀಲು : ಭಜನೆ, ಭಗವದ್ಗೀತೆ ಪಠಣ, ಶ್ಲೋಕಗಳನ್ನು ಹೇಳುತ್ತ, ನಮ್ಮ ಹಿಂದು ಧರ್ಮ, ಸಂಸ್ಕಾರ, ಆಚರಣೆಗಳ ಮಹತ್ವವನ್ನು ಅರಿತುಕೊಂಡು ಸುಜ್ಞಾನಿಗಳಾಗಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಗೆ ಹಿಂದೂ ಧಾರ್ಮಿಕ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಶ್ರಯದಲ್ಲಿ ಉಡುಪಿ ಪೇಜಾವರ ಮಠದ ಸಹಯೋಗದಲ್ಲಿ ಸಮಸ್ತ ಹಿಂದೂ ಬಾಂಧವರಿಗೆ ಒಂದು ವಾರಗಳ ಕಾಲ ಆಯೋಜಿಸಲಾದ ಹಿಂದೂ ಧಾರ್ಮಿಕ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಖ್ಯಾತ ಪ್ರವಚನಕಾರ ಕುತ್ಪಾಡಿ ಕೃಷ್ಣರಾಜ ಭಟ್, ಮಕ್ಕಳಲ್ಲಿ ದೇಶ, ಧರ್ಮ, ಸಂಸ್ಕಾರಗಳ ಕುರಿತು ಅಭಿಮಾನ ಬೆಳೆಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಈ ಶಿಬಿರ ಎಂದರು.ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುಬ್ರಹ್ಮಣ್ಯಪ್ರಸಾದ್ ಕೋರ‍್ಯಾರ್ , ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ ಮಲ್ಲಿಗೆಯಂಗಡಿ, ಸದಸ್ಯ ಲೋಕಯ್ಯ ಸಾಲ್ಯಾನ್, ವೈ. ಎನ್. ಸಾಲ್ಯಾನ್ ಮೂಲ್ಕಿ, ಪಾರ್ಥಸಾರಥಿ ಮುಂತಾದವರಿದ್ದರು.ಋಷಿಕ್ ಪ್ರಾರ್ಥಿಸಿದರೆ, ಶಿಕ್ಷಕ ಶ್ರೀವತ್ಸ ಸ್ವಾಗತಿಸಿದರು. ಉಪನ್ಯಾಸಕಿ ಶೈಲಜಾ ನಿರೂಪಿಸಿದರು. ಕೇಶವ ಎಚ್. ವಂದಿಸಿದರು.