ಕಟೀಲಿನಲ್ಲಿ ವಸಂತ ವೇದ ಶಿಬಿರ ಉದ್ಘಾಟನೆ
ಕಟೀಲು : ಧಾರ್ಮಿಕ ಆಚರಣೆಗಳ ಜ್ಞಾನವನ್ನು ನೀಡುವ ಕೆಲಸ ನಿರಂತರವಾಗಬೇಕು ಎಂದು ಮೈಸೂರು ವಿವಿಯ ನಿವೃತ್ತ ಪ್ರಾಧ್ಯಾಪಕರಾದ ಡಾ. ಗೋಪಾಲ ಮರಾಠೆ ಹೇಳಿದರು.
ಅವರು ಕಟೀಲು ದೇಗುಲದಲ್ಲಿ ನಡೆಯುವ ವಸಂತ ವೇದ ಶಿಬಿರವನ್ನು ಉದ್ಘಾಟಿಸಿದರು.
ನಿವೃತ್ತ ಉಪನ್ಯಾಸಕರಾದ ಡಾ. ಕೆ. ನಾರಾಯಣ ಭಟ್, ಕಟೀಲು ದೇಗುಲದ ಅರ್ಚಕರಾದ ಶ್ರೀಹರಿನಾರಾಯಣದಾಸ ಆಸ್ರಣ್ಣ, ವಸಂತ ವೇದ ಶಿಬಿರದ ಪಾಯೋಜಕರಾದ ಸಂಜೀವನಿ ಟ್ರಸ್ಟ್‌ನ ಡಾ. ಸುರೇಶ್ ರಾವ್. ಸಂಸ್ಕೃತ ಪ್ರಾಧ್ಯಾಪಕ ಡಾ. ಪದ್ಮನಾಭ ಮರಾಠೆ, ಶ್ರೀವತ್ಸ ಮತ್ತಿತರರಿದ್ದರು.