Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಮಹೋತ್ಸವದ ಪೂರ್ವಭಾವಿಯಾಗಿ ತೋರಣ ಮುಹೂರ್ತ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ  ಮಹೋತ್ಸವದ ಪೂರ್ವಭಾವಿಯಾಗಿ ತೋರಣ ಮುಹೂರ್ತವು ಆದಿತ್ಯವಾರದಂದು ಸಂಜೆ ನಡೆಯಿತು.ಎ.13 ರ ಮಂಗಳವಾರ ಸಂಜೆ ಸಿತ್ಲ, ಗಿಡಿಗೆರೆ ಗಳಿಂದ ಹೊರೆಕಾಣಿಕೆ ಬಂದು ಬಳಿಕ ತರಕಾರಿ ಮುಹೂರ್ತ ನಡೆದು  ಅಂಕುರ ರೋಹಣ  ನಡೆಯಲಿದೆ. ಎ.14 ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಧ್ವಜಾರೋಹಣದೊಂದಿಗೆ ವರ್ಷಾವಧಿ ಉತ್ಸವ ಆರಂಭಗೊಳ್ಳಲಿದೆ.
 ಎ.15ರಂದು ಯುಗಾದಿ ದೀಪದ ಬಲಿ, ಎ.16 ಕ್ಕೆ ಭ್ರಾಮರೀವನದಲ್ಲಿ ಪ್ರತಿಷ್ಟಾ ವರ್ಧಂತಿ, ಮೂಡುಸವಾರಿ, ಎ.17 ರಂದು ದೀಪದ ಬಲಿ, ಉತ್ಸವ ಬಲಿ, ಎ.18 ರಂದು ರಾತ್ರಿ ಬೆಳ್ಳಿ ರಥೋತ್ಸವ, ಎ.19  ರಂದು ಬ್ರಹ್ಮಸನ್ನಿಧಿಯಲ್ಲಿ ಪರ್ವ, ಪಡುಸವಾರಿ, ಎ,20  ರಂದು ಹಗಲು ಬ್ರಹ್ಮರಥೋತ್ಸವ, ರಾತ್ರಿ ಶಯನ, ಎ.21 ರಂದು ಬೆಳಿಗ್ಗೆ ಕವಾಟೋದ್ಘಾಟನೆ, ರಾತ್ರಿ ಅವಭೃತೋತ್ಸವ, ಎಕ್ಕಾರು ಯಾತ್ರೆ, ಬ್ರಹ್ಮರಥೋತ್ಸವ, ತೂಟೆದಾರ ನಡೆಯಲಿದೆ. ದಿನಂಪ್ರತಿ ಚಿನ್ನದ ಪಲ್ಲಕ್ಕಿ ಉತ್ಸವ, ಚಿನ್ನದ ರಥೋತ್ಸವ ನಡೆಯಲಿವೆ

 ದಿನಂಪ್ರತಿ ಬೆಳಿಗ್ಗೆ ಗಂಟೆ 9 ರಿಂದ ರಾತ್ರಿಯವರೆಗೆ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸರಸ್ವತೀ ಸದನದಲ್ಲಿ ನಡೆಯಲಿವೆ.