Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪ್ರಯತ್ನಶೀಲತೆಯಿಂದ ಮಾತ್ರ ಯಶಸ್ಸು - ಪ್ರೊ. ಹರೀಶ್ ಆಚಾರ್ಯ


ಕಟೀಲು : ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಹಣೆಬರಹ ಇದ್ದ ಹಾಗೆ ಆಗುತ್ತದೆಯೆಂದು ಕೈಕಟ್ಟಿ ಕೂರದೇ ಪ್ರಾಮಾಣಿಕ ಪ್ರಯತ್ನ ಮಾಡಿದಲ್ಲಿ ಮಾತ್ರ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ ಎಂದು  ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರೀಶ್ ಆಚಾರ್ಯ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. 
ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕಿರಣ್ ಕುಮಾರ್ ಶೆಟ್ಟಿಯವರು ಕಾಲೇಜಿಗೆ ಕೊಡುಗೆಯಾಗಿ ನೀಡಿದ ಹುಲ್ಲು ಕತ್ತರಿಸುವ ಯಂತ್ರವನ್ನು ಆಡಳಿತ ಮಂಡಳಿಯ ಪರವಾಗಿ  ಕಟೀಲು ದೇವಳದ ಅನುವಂಶಿಕ ಅರ್ಚಕರಾದ ಶ್ರೀ ಸದಾನಂದ ಆಸ್ರಣ್ಣ  ಸ್ವೀಕರಿಸಿದರು. 
ಕಾಲೇಜಿನ ಹಿರಿಯ ವಿದ್ಯಾರ್ಥಿಸಂಘದ ಕಾರ್ಯಕಾರೀ ಸಮಿತಿಯ ಸದಸ್ಯರಾದ ಶ್ರೀಮತಿ ವೃಂದಾ ಶಶಿಧರ್ ಹೆಗ್ಡೆ, ಪ್ರಾಂಶುಪಾಲ ಡಾ. ವಿಜಯ್ ವಿ., ಶಿಕ್ಷಕ ಪ್ರತಿನಿಧಿ ಡಾ. ಪದ್ಮನಾಭ ಮರಾಠೆ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಅಶ್ವಿತಾ ವಿ. ಶೆಟ್ಟಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾರ್ತಿಕ್ ಎಸ್. ನಾಯ್ಕ್, ಉಪಾಧ್ಯಕ್ಷ ತರುಣ್ ಡಿ.ದೇವಾಡಿಗ, ಕಾರ್ಯದರ್ಶಿ ಕೃಪಾ ಟಿ. ಶೆಟ್ಟಿ ಮತ್ತು ಜತೆ ಕಾರ್ಯದರ್ಶಿ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಪೂಜಾ ಕಾಂಚನ್  ಸ್ವಾಗತಿಸಿದರು. ಗ್ರಂಥಪಾಲಕಿ ಸುಮಿತ್ರಾ ಧನ್ಯವಾದ ಸಮರ್ಪಿಸಿದರು. ಪ್ರಜ್ಞಾ ಭಂಡಾರಿ  ನಿರೂಪಿಸಿದರು