ಕಟೀಲು ದೇವಳದ ರಕ್ತೇಶ್ವರೀ ಗುಡಿಯ ಬ್ರಹ್ಮಕಲಶಾಭಿಷೇಕ
Thursday, April 2, 2026
ಕಟೀಲು:ಶ್ರೀ ಕ್ಷೇತ್ರ ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇವರ ಪರಿವಾರ ದೇವತೆಯಾದ ಶ್ರೀ ರಕ್ತೇಶ್ವರೀ ಗುಡಿಯನ್ನು ಬರೋಡ ಶಶಿಧರ ಶೆಟ್ಟಿಯವರು ಸುಮಾರು 9೦ ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಿ ಸೇವಾ ರೂಪದಲ್ಲಿ ನೀಡಿದ್ದು, ಗುರುವಾರ ಇಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಟೆ ಹಾಗೂ ಬ್ರಹ್ಮಕಲಶಾಭಿಷೇಕ ವೈಭವದಿಂದ ನಡೆಯಿತು. ಸುವಾಸಿನಿ ಆರಾಧನೆಯ ಪ್ರಯುಕ್ತ ಐದು ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಸೀರೆ ವಿತರಿಸಲಾಯಿತು. ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಹಿತ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.