ಎಪ್ರಿಲ್ 23 ರಿಂದ ಕಟೀಲಿನಲ್ಲಿ ಹಿಂದೂ ಧಾರ್ಮಿಕ ಶಿಬಿರ
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಶ್ರಯದಲ್ಲಿ ಪೇಜಾವರ ಮಠದ ಸಹಯೋಗದಲ್ಲಿ ಎಪ್ರಿಲ್ 23 ರಿಂದ ತಾ. 30 ರವರೆಗೆ ಹಿಂದೂ ಧಾರ್ಮಿಕ ಶಿಬಿರ ನಡೆಯಲಿದೆ.
ಕಟೀಲು ಪ್ರೌಢಶಾಲಾ ಆವರಣದಲ್ಲಿ ದಿನಂಪ್ರತಿ ಬೆಳಿಗ್ಗೆ 9 ಗಂಟೆಯಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಜಾತಿಮತ ಬೇಧವಿಲ್ಲದೆ 4 ನೆಯ ತರಗತಿಗಿಂತ ಮೇಲ್ಪಟ್ಟ ಮಕ್ಕಳು, ಪುರುಷರು, ಮಹಿಳೆಯರಿಗೆ ಹಿಂದೂ ಧರ್ಮದ ಸಂಸ್ಕೃತಿ, ಆಚಾರ, ವಿಚಾರ ತಿಳಿಸಲಾಗುವುದು. ಮೈಸೂರು ರಾಮಚಂದ್ರಾಚಾರ್, ಕುತ್ಪಾಡಿ ಕೃಷ್ಣರಾಜ ಭಟ್, ಗಜಾನನ ಪೈ, ಪ್ರವೀಣ್ ಸರಳಾಯ ಮುಂತಾದವರು ತರಬೇತಿ ನೀಡಲಿದ್ದಾರೆ. ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ಪಾರ್ಥಸಾರಥಿ 9845228766 ಶ್ರೀವತ್ಸ ಕಟೀಲು 9880055206 ಇವರಿಗೆ ತಿಳಿಸಬಹುದಾಗಿದೆ ಎಂದು ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ.