Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ರಾಮ್ ಫ್ರೆಂಡ್ಸ್ ರಿ. ಕಟೀಲು ತಂಡದಿಂದ ಪೊಳಲಿ ಯಲ್ಲಿ ನಡೆದ ಆರೋಗ್ಯ ಸೇವಾಪಥ ಅಭಿಯಾನದಲ್ಲಿ ಕ್ಯಾನ್ಸರ್ ಪೀಡಿತ ಮಗುವಿನ ಚಿಕಿತ್ಸೆಗೆ 1.5 ಲ.ರೂ ಧನಸಹಾಯದ ನೆರವು

ಕಟೀಲು :ರಾಮ್ ಫ್ರೆಂಡ್ಸ್ ರಿ ಕಟೀಲು ತಂಡದಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಜಾತ್ರೆಯಲ್ಲಿ ನಡೆದ ಆರೋಗ್ಯ ಸೇವಾ ಪಥ ಅಭಿಯಾನದಲ್ಲಿ ಸಂಗ್ರಹವಾದ ಮೊತ್ತವನ್ನು  ಬಂಟ್ವಾಳ ತಾಲೂಕಿನ ಕರ್ಪೆ ನಿವಾಸಿಯಾಗಿರುವ ಸಂತೋಷ್ ಪೂಜಾರಿ ಯವರ  ನಾಲ್ಕು  ವರ್ಷದ ಮಗ ಸಾರ್ಥಕ್ ಪೂಜಾರಿ  ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಮಗುವಿನ ಚಿಕಿತ್ಸೆಗೆ  ತಂಡದ ಸೇವಾ ಬಂಧುಗಳ ಹಾಗೂ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಸಹಕರಿಸಿದ ಮೊತ್ತವನ್ನು ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನ ಕ್ಷೇತ್ರದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮ್ ಭಟ್ ಪೊಳಲಿ ಇವರ ಅಭಯ ಹಸ್ತದಿಂದ 1,50,000 ರೂಪಾಯಿಯ ಚೆಕ್ಕನ್ನು  ಮಗುವಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ  ದೇವಸ್ಥಾನದ  ಆಡಳಿತ ಮಂಡಳಿಯ ನಾಗೇಶ್ ಪೊಳಲಿ , ಯಶವಂತ್ ಪೊಳಲಿ, ತಂಡದ ಸ್ಥಾಪಕಾಧ್ಯಕ್ಷ  ರಮಾನಂದ ಪೂಜಾರಿ ಕಟೀಲು, ಅಧ್ಯಕ್ಷ  ಸುಮಂತ್ ಸುವರ್ಣ ಬಡಗಮಿಜಾರು, ಸದಸ್ಯರಾದ ರಾಕೇಶ್ ಪೊಳಲಿ,  ಗಣೇಶ್ ಕೋಟ್ಯಾನ್ ಪೆರ್ಮುದೆ , ಗುರುಪ್ರಸಾದ್ ಮುಲ್ಕಿ, ಲಕ್ಷ್ಮಣ ಪೂಜಾರಿ ಪೊಳಲಿ, ನಾಗೇಶ್ ಬುಡಿಗಾಡ್, ರಾಕೇಶ್ ಬಜ್ಪೆ, ಶಶಿ ಬುಡಿಗಾಡ್,ಅಜಿತ್ ಆಚಾರ್ಯ, ಧನುಸ್ಸು ಉಲ್ಲಂಜೆ,ಸಾತ್ವಿಕ್ ಉಲ್ಲಂಜೆ, ಪ್ರಜ್ವಲ್ ಮೂರುಕಾವೇರಿ, ಗೋಪಿನಾಥ್ ಭಟ್ರಕೆರೆ  ಉಪಸ್ಥಿತರಿದ್ದರು.