Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಎಪ್ರಿಲ್ 15:ರಿಂದ ಕಟೀಲು ಜಾತ್ರೆ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಎ.14 ರಂದು ಧ್ವಜಾರೋಹಣದೊಂದಿಗೆ ವರ್ಷಾವಧಿ ಉತ್ಸವ ನಡೆಯಲಿದೆ. ಎ.13'ರಂದು ರಾತ್ರಿ ಅಂಕುರ ಬಲಿ, ಎ.15ರಂದು ಯುಗಾದಿ ದೀಪದ ಬಲಿ, ಎ.16 ಕ್ಕೆ ಭ್ರಾಮರೀವನದಲ್ಲಿ ಪ್ರತಿಷ್ಟಾ ವರ್ಧಂತಿ, ಮೂಡುಸವಾರಿ, ಎ.17 ರಂದು ದೀಪದ ಬಲಿ, ಉತ್ಸವ ಬಲಿ, ಎ.18 ರಂದು ರಾತ್ರಿ ಬೆಳ್ಳಿ ರಥೋತ್ಸವ, ಎ.19  ರಂದು ಬ್ರಹ್ಮಸನ್ನಿಧಿಯಲ್ಲಿ ಪರ್ವ, ಪಡುಸವಾರಿ, ಎ,20  ರಂದು ಹಗಲು ಬ್ರಹ್ಮರಥೋತ್ಸವ, ರಾತ್ರಿ ಶಯನ, ಎ.21 ರಂದು ಬೆಳಿಗ್ಗೆ ಕವಾಟೋದ್ಘಾಟನೆ, ರಾತ್ರಿ ಅವಭೃತೋತ್ಸವ, ಎಕ್ಕಾರು ಯಾತ್ರೆ, ಬ್ರಹ್ಮರಥೋತ್ಸವ, ತೂಟೆದಾರ ನಡೆಯಲಿದೆ. ದಿನಂಪ್ರತಿ ಚಿನ್ನದ ಪಲ್ಲಕ್ಕಿ ಉತ್ಸವ, ಚಿನ್ನದ ರಥೋತ್ಸವ ಹಾಗೂ ಸರಸ್ವತೀ ಸದನದಲ್ಲಿ ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ