Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮೇ 10 ರಂದು ಕಟೀಲಿನಲ್ಲಿ ಭಜನಾ ಸ್ಪರ್ಧೆ

ಕಟೀಲು : ಶ್ರೀ ಕಟೀಲು ಪ್ರತಿಷ್ಠಾನದ ಕಟೀಲು ಕಲಾ ಉತ್ಸವದ ಅಂಗವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮುಂಭಾಗದಲ್ಲಿ ಮೇ 10 ರಂದು ದ.ಕ ಉಡುಪಿ ಉಭಯ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಭಜನಾ ಸ್ಪರ್ಧೆ ನಡೆಯಲಿದೆ ಎಂದು ಪ್ರತಿಷ್ಠಾನ ಅಧ್ಯಕ್ಷ ಅನಂತಪದ್ಮನಾಭ ಆಸ್ರಣ್ಣ ತಿಳಿಸಿದ್ದಾರೆ,
ಕುಟುಂಬ ಭಜನೆ ಸ್ಪರ್ಧೆ, 16 ವರ್ಷದ ಮೇಲಿನವರಿಗೆ ಹಾಗೂ 16 ವರ್ಷದ ಕೆಳಗಿನವರಿಗೆ ಹೀಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತರಿಗೆ ನಗದು ಬಹುಮಾನಗಳನ್ನು ನೀಡಲಾಗುವುದು.
ಕುಟುಂಬ ಭಜನೆ ಸ್ಪರ್ಧೆ ವಿಭಾಗದಲ್ಲಿ ಒಂದು ತಂಡದಲ್ಲಿ ಕನಿಷ್ಠ 3 ಗರಿಷ್ಠ 6 ಸದಸ್ಯರು ಭಾಗವಹಿಸಬಹುದು. ಒಂದು ತಂಡದಲ್ಲಿ ಒಂದೇ ಮನೆಯ ತಂದೆ-ತಾಯಿಯ-ಮಕ್ಕಳು-ಅಜ್ಜ-ಅಜ್ಜಿಯಂದಿರು ಮಾತ್ರವೇ ಭಾಗವಹಿಸಬಹುದು. 16  ವರ್ಷಕ್ಕಿಂತ ಮೇಲಿನವರು ಹಾಗೂ ಕೆಳಗಿನವರು ವಿಭಾಗದಲ್ಲಿ ಒಂದು ತಂಡದಲ್ಲಿ ಕನಿಷ್ಠ 5  ಗರಿಷ್ಠ 10  ಮಂದಿ  (ಹಿಮ್ಮೇಳದವರು ಹೊರತು ಪಡಿಸಿ) ಭಾಗವಹಿಸಬಹುದು. ತಬಲ, ಹಾರ್ಮೋನಿಯಂ, ಟಮ್ಕಿ, ಗೆಜ್ಜೆ ಹೊರತು ಪಡಿಸಿ ಬೇರೆ ಸಂಗೀತ ಪರಿಕರಗಳನ್ನು ಉಪಯೋಗಿಸುವಂತಿಲ್ಲ. ದಾಸರ ಪದಗಳಿಗೆ ಮಾತ್ರವೇ ಅವಕಾಶ ಇದ್ದು, ಸ್ಪರ್ಧಾಸಕ್ತರು ಎಪ್ರಿಲ್ 26 ರ ಒಳಗಾಗಿ ದೂರವಾಣಿ ಸಂಖ್ಯೆ 9036111350  ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.