Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿ ಲಿ. ಹಳೆಯಂಗಡಿ ದಾಖಲೆಯ 483 ಕೋಟಿ ರೂ. ವ್ಯವಹಾರ : ಎಚ್ ವಸಂತ್ ಬೆರ್ನಾರ್ಡ್

ಹಳೆಯಂಗಡಿ:ಸದಸ್ಯರ ಪ್ರೋತ್ಸಾಹ, ಗ್ರಾಹಕರ ಸಹಕಾರ, ಆಡಳಿತ ವರ್ಗದವರ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಕಾರ್ಯಶ್ರಮತೆಯಿಂದಾಗಿ 2025-26ನೇ ಸಾಲಿನಲ್ಲಿ ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿ ಲಿ. ಹಳೆಯಂಗಡಿ 483 ಕೋಟಿ ರೂ ವ್ಯವಹಾರ ನಡೆಸಿದೆ ಎಂದು ಸೊಸೈಟಿಯ  ಅಧ್ಯಕ್ಷ  ಹೆಚ್.ವಸಂತ್ ಬೆರ್ನಾರ್ಡ್ ಹೇಳಿದರು.

ಮಾಜಿ ಸಚಿವ  ಕೆ .ಅಭಯ ಚಂದ್ರ ಜೈನ್ ರವರ ಮಾರ್ಗದರ್ಶನದಲ್ಲಿ  ಸಹಕಾರಿ ಭೀಷ್ಮ ದಿವಂಗತ ಎಚ್ ನಾರಾಯಣ ಸನಿಲ್ ಮತ್ತು ದಿವಂಗತ ಪಂಜದಗುತ್ತು ಶಾಂತರಾಮ ಶೆಟ್ಟಿ ರವರ ಪ್ರೇರಣಾ ಶಕ್ತಿಯಿಂದ 2021 ರಲ್ಲಿ ಪ್ರಾರಂಭವಾದ ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿಯು, ವರದಿ ಸಾಲಿನಲ್ಲಿ 483 ಕೋಟಿ ರೂ. ವ್ಯವಹಾರವನ್ನು ದಾಖಲಿಸಿದೆ. ಕಳೆದ ಸಾಲಿನ ವ್ಯವಹಾರವನ್ನು ತುಲನೆ ಮಾಡಿದರೇ ಶೇ 72.86% ಏರಿಕೆಯನ್ನು ಕಂಡಿದೆ. ಪ್ರಸ್ತುತ 38.32 ಕೋಟಿ ರೂ. ಠೇವಣಿ, 32.48 ಕೋಟಿ ರೂ. ಸಾಲ ಮತ್ತು ಮುಂಗಡಗಳೊಂದಿಗೆ  ರೂ.76.57 ಲಕ್ಷ ಪಾಲು ಬಂಡವಾಳ, ರೂ.90.50 ಲಕ್ಷ ನಿಧಿಗಳು,  ರೂ.40 ಕೋಟಿ ದುಡಿಯುವ ಬಂಡವಾಳ ಹೊಂದಿರುತ್ತದೆ ಎಂದು ತಿಳಿಸಿದರು. 2025-26ನೇ ಸಾಲಿನಲ್ಲಿ ಉತ್ತಮ ಲಾಭಾಂಶ ಗಳಿಸಿದ್ದು, ಸದಸ್ಯರಿಗೆ ಉತ್ತಮ ರೀತಿಯ ಪಾಲು ಮುನಾಫೆಯನ್ನು ಹಂಚುವ ಗುರಿ ಹೊಂದಿದೆ ಎಂದರು.
ಹಳೆಯಂಗಡಿ ,ಪಡುಬಿದ್ರೆ, ಕಿನ್ನಿಗೋಳಿ ಮತ್ತು ಮೂಡಬಿದ್ರೆಯಲ್ಲಿ ಒಟ್ಟು ನಾಲ್ಕು ಶಾಖೆಗಳನ್ನು ಹೊಂದಿರುವ ಸೊಸೈಟಿಯು ವರದಿ ವರ್ಷದಲ್ಲಿ ಕೂಡ ಹೊಸ ಶಾಖೆ ಒಂದನ್ನು ತೆರೆಯುವ ಗುರಿ ಇಟ್ಟುಕೊಂಡಿದೆ ಎಂದು ತಿಳಿಸಿದರು.

 ಅವಲೋಕನ ಸಭೆಯಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ, ಲೆಕ್ಕಿಗರಾದ ಲೋಲಾಕ್ಷಿ ಉಪಸ್ಥಿತರಿದ್ದರು.