Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಂಬಳ ನಮ್ಮ ತುಳುನಾಡ ಪರಂಪರೆ - ಅನಂತಆಸ್ರಣ್ಣ

ಗುರುಪುರ  : ಕಂಬಳ ನಮ್ಮ ತುಳುನಾಡ ಪರಂಪರೆಯಾಗಿದೆ, ಪರಸ್ಪರ ಬಾಂದವ್ಯ ಬೆಸೆಯುವ ಕಂಬಳದ ಶ್ರೇಷ್ಠತೆಯಿಂದ ಜಗತ್ತೇ ತುಳುನಾಡಿನ ಸಂಸ್ಕೃತಿಯನ್ನು ಕಾಣುವಂತಾಗಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು.
ಅವರು ಗುರುಪುರದ ಮಾಣಿಬೆಟ್ಟುವಿನಲ್ಲಿ  3ನೇ ವರ್ಷದ ಹೊನಲು ಬೆಳಕಿನ "ಮೂಳೂರು-ಅಡ್ಡೂರು" ಜೋಡುಕರೆ ಕಂಬಳವನ್ನು ಸಂಪ್ರದಾಯವಾಗಿ ಹಿಂಗಾರ ಅರಳಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮೂಳೂರು ಅಡ್ಡೂರು ಜೋಡು ಕರೆ ಕಂಬಳ ಸಮಿತಿಯ ಅಧ್ಯಕ್ಷ ಇನಾಯತ್ ಆಲಿ ಮೂಲ್ಕಿ ಅಧ್ಯಕ್ಷತೆಯನ್ನು ವಹಿಸಿ, ತಮ್ಮ ಸೇವಾ ಟ್ರಸ್ಟ್ ನ ಮೂಲಕ ಅಶಕ್ತರಿಗೆ ಸುಮಾರು 25 ಲಕ್ಷ ರೂ. ನೆರವನ್ನು ವಿತರಿಸಿ, ಸಾಮರಸ್ಯವನ್ನು ಸಾರುವ ಮೂಲಕ ಕಂಬಳದ ತುಳುನಾಡ ಜನಪದ ಸಂಸ್ಕೃತಿಯನ್ನು ಉಳಿಸುವ  ಸಂಯೋಜನೆಯೊಂದಿಗೆ ದುರ್ಬಲವರ್ಗದವರಿಗೆ ಆಸರೆಯಾಗುವುದಕ್ಕೆ ಸಂತಸವಾಗಿದೆ ಎಂದರು.
ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ  ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ ಕಂಬಳವನ್ನು ಉದ್ಘಾಟಿಸಿದರು.
 ಕಂಬಳದಲ್ಲಿ ಪಾಲ್ಗೊಂಡ ಕೋಣದ ಯಜಮಾನರಿಗೆ ಬೆಳ್ಳಿಯ ನಾಣ್ಯ ಹಾಗೂ ಕೋಣಗಳಿಗೆ 30 ಕೆ.ಜಿ.ಹುರಳಿಯನ್ನು ಉಚಿತವಾಗಿ ವಿತರಿಸಲಾಯಿತು.
ಸಾರ್ವಜನಿಕ‌ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಯಿತು.
ಸುಮಾರು ಇನ್ನೂರಕ್ಕೂ ಹೆಚ್ಚು ಜೋಡಿ ಕೋಣಗಳು ಭಾಗವಹಿಸಿದ್ದು ಭಾನುವಾರ ಸಂಜೆ ಕಂಬಳ ಸಂಪನ್ನಗೊಳ್ಳಲಿದೆ.
ಜಿಲ್ಲಾ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಗುಣಪಾಲ ಕಡಂಬ, ಶಶಿಧರ್ ಭಟ್ ಬೊಳ್ಮಾರಗುತ್ತು,  ಗೂಳಿದಡಿಗುತ್ತು  ವರ್ಧಮಾನ್ ಶೆಟ್ಟಿ , ಕೊಡೆತ್ತೂರು ಗುತ್ತು ನಿತಿನ್ ಶೆಟ್ಟಿ,  ಬೆಳ್ಳೂರು ಕಾವೇಶ್ವರ ದೇವಸ್ಥಾನದ ರಘು ಶೆಟ್ಟಿ,  ರವಿರಾಜ್ ಶೆಟ್ಟಿ ನಿಟ್ಟೆಗುತ್ತು,  ಪಾಂಡುರಂಗ ಕಾಮತ್, ಶೆಡ್ಡೆ ಮಂಜುನಾಥ ಭಂಡಾರಿ,  ಪ್ರಮೋದ್ ಕುಮಾರ್ ರೈ,  ಚಂದ್ರಹಾಸ ಪೂಜಾರಿ,  ತನಿಯಪ್ಪ ಪೂಜಾರಿ,  ಮಲ್ಲಿಕಾ ಪಕ್ಕಳ,  ಪುರುಷೋತ್ತಮ ಚಿತ್ರಾಪುರ, ಶೇಖರ್ ಮಟ್ಟಿ,  ಲಕ್ಷ್ಮೀಶ ಗಬಲಡ್ಕ,  ಹರಿಯಪ್ಪ ಮುತ್ತೂರು, ಬೂಬ ಪೂಜಾರಿ, ಜಯರಾಜ್ ಎಚ್ಎಸ್ ಪೂಜಾರಿ, ಸುಧೀರ್ ಪಕ್ಕಳ,  ಜಯಂತ್ ಅಮೀನ್ ಕೋರೆಟ್ಟು,  ಪದ್ಮನಾಭ ಪೂಜಾರಿ ಕುದ್ರೋಳಿ,  ಸಮಿತಿಯ ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್ ಪೆಲತ್ತಡಿ,  ಯಶವಂತ ಕುಮಾರ್ ಶೆಟ್ಟಿ ಬೆಳ್ಳೂರುಗುತ್ತು,  ರಾಜಕುಮಾರ್ ಶೆಟ್ಟಿ,  ಜಗದೀಶ ಶೆಟ್ಟಿ ಮಾಣಿಬೆಟ್ಟುಗುತ್ತು,  ವಿನಯ್ ಕುಮಾರ್ ಶೆಟ್ಟಿ,  ಸುರೇಂದ್ರ ಕಂಬಳಿ, ಜಯಶೀಲ ಅಡ್ಯಂತಾಯ,  ಗಿರೀಶ್ ಆಳ್ವ ಪದ್ಮನಾಭ ಶೆಟ್ಟಿ,  ಹರೀಶ್ ಭಂಡಾರಿ, ಬಾಲಕೃಷ್ಣ ಪೂಜಾರಿ,  ಪುರುಷೋತ್ತಮ ಮಲ್ಲಿ,  ಮುಂಬೈ ಸಮಿತಿಯ ಸತೀಶ್ ಚೌಟ ಬೆಳ್ಳೂರುಗುತ್ತು,  ಸತೀಶ್ ಎಂ ಶೆಟ್ಟಿ, ಕಾರಮೊಗರುಗುತ್ತು, ರೋಹಿತ್ ಶೆಟ್ಟಿ ಬೆಳ್ಳೂರುಗುತ್ತು,  ಕಿರಣ್ ಶೆಟ್ಟಿ  ಮತ್ತಿತರರು ಇದ್ದರು. ವಿಜೇತ ಶೆಟ್ಟಿ ಮತ್ತು ಮನೋಜ್ ವಾಮಂಜೂರು ನಿರೂಪಿಸಿದರು.