Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಂಬಳ ಧಾರ್ಮಿಕತೆಯ ಸಂಕೇತ - ಡಿ.ಕೆ ಸುರೇಶ್

ಗುರುಪುರ:ಕಂಬಳ ಧಾರ್ಮಿಕತೆಯ  ಸಂಕೇತವಾಗಿದ್ದು,ಯುವಜನತೆ  ಕಂಬಳ ಸಂಸ್ಕೃತಿಯನ್ನು ಉಳಿಸುವ ಕಾರ್ಯಮಾಡಬೇಕಿದೆ
 ಎಂದು ಬೆಂಗಳೂರು ಹಾಲು ಒಕ್ಕೂಟ (ಬಮುಲ್ ) ನ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಿ.ಕೆ ಸುರೇಶ್ ಹೇಳಿದರು.ಅವರು ಮೂಳೂರು - ಅಡ್ಡೂರು  ಜೋಡುಕರೆ ಕಂಬಳ ಸಮಿತಿ ವತಿಯಿಂದ  ಇನಾಯತ್ ಆಲಿಯವರ ಅಧ್ಯಕ್ಷತೆಯಲ್ಲಿ ಗುರುಪುರದ ಮಾಣಿಬೆಟ್ಟುವಿನಲ್ಲಿ ನಡೆದ ಮೂಳೂರು - ಅಡ್ಡೂರು ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಇನಾಯತ್ ಅಲಿಯವರು ಕಳೆದ ಮೂರು ವರ್ಷಗಳಿಂದ ಕಂಬಳವನ್ನು  ಯಶಸ್ವಿಯಾಗಿ ಆಯೋಜಿಸುತ್ತ ಬಂದಿದ್ದು,ಸಂಸ್ಕೃತಿ ಪರಂಪರೆಯನ್ನು ಉಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಎಂದರು.ಗುರುಪುರ ಕಂಬಳ ಸಮಿತಿ ವತಿಯಿಂದ ಡಿ.ಕೆ ಸುರೇಶ್ ಅವರಿಗೆ ಚಿನ್ನದ ನೊಗ ಮತ್ತು ಬೆಳ್ಳಿಯ ಪಟ್ಟಿಯ ಕಂಬಳದ ಕೋಲು  ನೀಡಿ ಗೌರವಿಸಲಾಯಿತು.


ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ,ಆರ್ಥಿಕ ಸಮಸ್ಯೆ ಇರುವ ನೂರು ಕುಟುಂಬಕ್ಕೆ ಮದುವೆಗೆ ಒಟ್ಟು 25 ಲ.ರೂ ನೆರವಿನ ಸಹಾಯಹಸ್ತ  ನೀಡಲಾಯಿತು.


ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆ‌ರ್. ಪೂಜಾರಿ ಮಾಜಿ ಸಚಿವ ಅಭಯಚಂದ್ರ ಜೈನ್, ಕರ್ನಾಟಕ ಪರಿಸರ ಅಭಿವೃದ್ಧಿಮಂಡಳಿಯ ಅಧ್ಯಕ್ಷೆ  ಶಾಲೆಟ್ ಪಿಂಟೊ, ರಾಜ್ಯ ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಶಿವರಾಮ ಶೆಟ್ಟಿ ತಲ್ಲೂರು, ರಾಜ್ಯ ಕಂಬಳ ಅಸೋಸಿಯೇಶನ್ ಅಧ್ಯಕ್ಷ ಡಾ. ದೇವಿಪ್ರಸಾದ್‌ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿಯ ಪರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ,ಆದಾನಿ ಸಂಸ್ಥೆಯ ಕಿಶೋರ್ ಆಳ್ವ,ಜಗದೀಶ್ ಅಧಿಕಾರಿ, ಕೀರ್ತಿ ಗಣೇಶ್, ವಿನಯಕುಮಾರ್ ಶೆಟ್ಟಿ,ಬಿ.ಎಲ್. ಪದ್ಮನಾಭ, ಆ‌ರ್. ಕೆ. ಪೃಥ್ವಿರಾಜ್‌, ಜಗದೀಶ್ ಶೆಟ್ಟಿ, ಮೋಹನ್ ಕೋಟ್ಯಾನ್ ಮುಲ್ಕಿ ರಿಯಾಝ್ ಸುಲ್ತಾನ್ ಗೋಲ್ಡ್, ಮುನಿಯಾಲು ಉದಯಕುಮಾರ್ ಶೆಟ್ಟಿ ಪವರ್ ಟಿವಿಯ ರಾಕೇಶ್ ಶೆಟ್ಟಿ, ಕಂಬಳ ಸಮಿತಿಯ ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್ ಪೆಲತ್ತಡಿ, ಪ್ರಧಾನ ಕಾರ್ಯದರ್ಶಿ ಯಶವಂತ್ ಕುಮಾ‌ರ್ ಶೆಟ್ಟಿ ಬೆಳ್ಳೂರು ಗುತ್ತು, ಸ್ಥಾಪಕಾಧ್ಯಕ್ಷ ರಾಜ್ ಕುಮಾ‌ರ್ ಶೆಟ್ಟಿ  ತಿರುವೈಲು ಗುತ್ತು, ಕಾರ್ಯಾಧ್ಯಕ್ಷ ಜಗದೀಶ ಶೆಟ್ಟಿ ಮಾಣಿಬೆಟ್ಟುಗುತ್ತು, ವ್ಯವಸ್ಥಾಪಕ ವಿನಯಕುಮಾ‌ರ್ ಶೆಟ್ಟಿ ಮಾಣಿಬೆಟ್ಟುಗುತ್ತು, ಪ್ರಧಾನ ಸಂಚಾಲಕ ಸುರೇಂದ್ರಕಂಬಳಿ, ಜಯಶೀಲ ಅಡ್ಯಂತಾಯ, ಗಿರೀಶ್ ಆಳ್ವ, ಪದ್ಮನಾಭ ಶೆಟ್ಟಿ ದೋಣಿಂಜೆಗುತ್ತು, ಕೋಶಾಧಿಕಾರಿ ಹರೀಶ್ ಭಂಡಾರಿ, ಜೊತೆ ಕಾರ್ಯದರ್ಶಿಗಳಾದ ಬಾಲಕೃಷ್ಣ ಪೂಜಾರಿ ಬರಿಪಟ್ಟ ಪುರುಷೋತ್ತಮ ಮಲ್ಲಿ ದೋಣಿಂಜೆಗುತ್ತು,ಸತೀಶ್ಚಂದ್ರ ಸಾಲ್ಯಾನ್ ,ಯಾಕೂಬ್ ಗುರುಪುರ,ಮೊಹಮ್ಮದ್ ಕುಂಞಿ ಮೊದಲಾದವರು ಉಪಸ್ಥಿತರಿದ್ದರು.