Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಗುರುಪುರ:ಖಾಸಗಿ ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ,ಚಾಲಕರಿಗೆ ಗಂಭೀರ ಗಾಯ

ಗುರುಪುರ: ಲಾರಿ ಹಾಗೂ ಖಾಸಗಿ ಬಸ್ ನಡುವೆ ಸಂಭವಿಸಿದ  ಭೀಕರ ಅಪಘಾತದಲ್ಲಿ ಚಾಲಕರಿಬ್ಬರು ಗಂಭೀರವಾಗಿ  ಗಾಯಗೊಂಡ ಘಟನೆ ಗುರುಪುರದಲ್ಲಿ ಬುಧವಾರದಂದು ನಡೆದಿದೆ.

ಲಾರಿ ಹಾಗೂ ಬಸ್ ಮುಖಾಮುಖಿಯಾಗಿ ಢಿಕ್ಕಿಹೊಡೆದ ಪರಿಣಾಮ ಎರಡೂ ವಾಹನಗಳ ಮುಂಭಾಗ ಜಖಂಗೊಂಡಿದೆ. 

 ಎರಡೂ ವಾಹನಗಳ ಒಳಗಡೆ ಸಿಲುಕಿದ್ದ ಚಾಲಕರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಚಾಲಕರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.