Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸ್ಕೂಟರ್ ಸವಾರರೊಬ್ಬರಿಗೆ ಖಾರದ ಪುಡಿ ಎರಚಿ ಸ್ಕೂಟರ್‌ನ ಢಿಕ್ಕಿಯಲ್ಲಿದ್ದ 46 ಸಾವಿರ ರೂ. ದೋಚಿ ಪರಾರಿ

ಕೈಕಂಬ : ಸ್ಕೂಟರ್ ಸವಾರರೊಬ್ಬರಿಗೆ ಖಾರದ ಪುಡಿ ಎರಚಿ ಸ್ಕೂಟರ್‌ನ ಢಿಕ್ಕಿಯಲ್ಲಿದ್ದ 46 ಸಾವಿರ ರೂ. ದೋಚಿರುವ ಘಟನೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ  ಗುರುಪುರ ಬಂಗ್ಲೆಗುಡ್ಡೆ ಎಂಬಲ್ಲಿ ನಡೆದಿದೆ.

ಘಟನೆಯಲ್ಲಿ  ಮುಹಮ್ಮದ್ ಮನ್ಸೂರ್ ಹಣ ಕಳೆದುಕೊಂಡವರು.

ಎ.26ರಂದು ರಾತ್ರಿ 9:10ರ ವೇಳೆಗೆ ಬಂಗ್ಲೆಗುಡ್ಡೆಯಲ್ಲಿ ರಸ್ತೆ ಬದಿ ನಿಂತಿದ್ದ ಇಬ್ಬರು ಯುವಕರು ಮನ್ಸೂರ್‌ರ ಸ್ಕೂಟರನ್ನು ನಿಲ್ಲಿಸಿ, ತಮ್ಮ ಸ್ಕೂಟರ್ ಕೆಟ್ಟಿದೆ ಎಂದು ಹೇಳಿದ್ದಾರೆ. ಮನ್ಸೂರ್ ಯುವಕರ ಸ್ಕೂಟರ್‌ನ ಸಮೀಪ ತೆರಳಿ ಪರಿಶೀಲಿಸುತ್ತಿರುವಾಗ, ಯುವಕರು ತಮ್ಮ ಬಳಿ ಇದ್ದ ಖಾರದ ಪುಡಿಯನ್ನು ಮನ್ಸೂರ್ ಕಣ್ಣಿಗೆ ಎರಚಿದ್ದಾರೆ. ಮನ್ಸೂರ್ ಬಳಿಕ ರಸ್ತೆಯಲ್ಲಿ ಬರುತ್ತಿದ್ದ ವಾಹನವೊಂದನ್ನು ನಿಲ್ಲಿಸಿ ಅವರಿಂದ ನೀರು ಪಡೆದು, ಮುಖ ತೊಳೆದು ಸ್ಕೂಟರ್‌ನ ಢಿಕ್ಕಿ ತೆರೆದು ನೋಡಿದಾಗ 46,000 ರೂ. ನಗದನ್ನು ದುಷ್ಕರ್ಮಿಗಳು ಎಗರಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಬಜಪೆ  ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.