Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಎ.28:ಬಳಕುಂಜ ಕೋಟ್ನಾಯಗುತ್ತುವಿನಲ್ಲಿ ಕಂಬಳೋತ್ಸವದ ಪ್ರಯುಕ್ತ ಶ್ರೀ ಸತ್ಯ ದೇವತೆ, ದೂಮಾವತಿ - ಬಂಟ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ

ಕಿನ್ನಿಗೋಳಿ: ಬಳಕುಂಜ ಕೋಟ್ನಾಯಗುತ್ತುವಿನಲ್ಲಿ ಕಂಬಳೋತ್ಸವದ ಪ್ರಯುಕ್ತ ಶ್ರೀ ಸತ್ಯ ದೇವತೆ, ದೂಮಾವತಿ - ಬಂಟ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವವು ಎ.28 ರಂದು  ಜರುಗಲಿರುವುದು.  ಬೆಳಿಗ್ಗೆ 9  ಕ್ಕೆ ಗ ಕೊಡಿಯಡಿ  ಏರುವುದು. ಬೆಳಿಗ್ಗೆ 11 ಕ್ಕೆ  ಭಂಡಾರ ಇಳಿಯುವುದು. ಮದ್ಯಾಹ್ನ 1 ರಿಂದ ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ಶ್ರಿ ಸತ್ಯದೇವತೆ ನೇಮೋತ್ಸವ ರಾತ್ರಿ 7 ರಿಂದ ಧೂಮಾವತಿ -ಬಂಟ ನೇಮೋತ್ಸವ, ರಾತ್ರಿ 8-30ರಿಂದ ಅನ್ನಸಂತರ್ಪಣೆ, ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ಜರಗಲಿರುವುದು ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೇವಗಳ ಸಿರಿ -ಮುಡಿ ಗಂಧಪ್ರಸಾದಗಳನ್ನು ಸ್ವೀಕರಿಸಿ ಕೃತಾರ್ಥರಾಗಿ ಎಂದು  ಬಳಕುಂಜ ಕಂಬಳ ಸಮಿತಿಯ ಪ್ರಕಟಣೆ ತಿಳಿಸಿದೆ.