ಎಕ್ಕಾರು:ಪಡುಬಿದ್ರಿ ಬ್ರಹ್ಮಕಲಶ,ಹೊರೆಕಾಣಿಕೆ ಸಮರ್ಪಣೆ ಪೂರ್ವಭಾವಿ ಸಭೆ
ಬಜಪೆ:ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಬಜಪೆ, ಎಕ್ಕಾರು, ಕಟೀಲು ಗ್ರಾಮಸ್ಥರಿಂದ ಹೊರೆಕಾಣಿಕೆಯ ಸಮರ್ಪಣೆಯು ನಡೆಯಲಿದ್ದು,ಈ ಬಗ್ಗೆ ಪೂರ್ವಭಾವಿ ಸಭೆಯು ಎಕ್ಕಾರು ಬಂಟರ ಭವನದಲ್ಲಿ ನಡೆಯಿತು.
ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶದ ಹೊರೆಕಾಣಿಕೆ ಸಮಿತಿಯ ಪ್ರಧಾನ ಸಂಚಾಲಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಅವರು ಹೊರೆಕಾಣಿಕೆಯ ವಸ್ತುಗಳ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಮೆರವಣಿಗೆಯ ಸ್ವರೂಪವನ್ನು ವಿವರಿಸಿದರು.
ಈ ಸಂದರ್ಭ ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ್ ಶೆಟ್ಟಿ ಎಕ್ಕಾರು, ಬಜಪೆ ಬಂಟರ ಸಂಘದ ಉಪಾಧ್ಯಕ್ಷ ಡಾ ಪ್ರಸಾದ್ ಶೆಟ್ಟಿ, ಎಕ್ಕಾರು ಬಂಟರ ಸಂಘ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ
ಎಕ್ಕಾರು ಮುರ ಸದಾಶಿವ ಶೆಟ್ಟಿ ,ಶಂಕರ ಶೆಟ್ಟಿ ಸರಪಳಿ ಗುತ್ತು, ಎಕ್ಕಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರವೀಣ್ ಆಚಾರ್ಯ ಹಾಗೂ ಮೊದಲಾದವರು ಉಪಸ್ಥಿತರಿದ್ದರು.