-->

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರ ಸಸಿಹಿತ್ಲು ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.8 ರವರೆಗೆ

 ಮಾತೃಶ್ರೀ ಡಾ. ಹೇಮಾವತಿ ಅಮ್ಮನವರ ಹುಟ್ಟುಹಬ್ಬದ ಪ್ರಯುಕ್ತ ಹಣ್ಣುಹಂಪಲು ವಿತರಣೆ

ಮಾತೃಶ್ರೀ ಡಾ. ಹೇಮಾವತಿ ಅಮ್ಮನವರ ಹುಟ್ಟುಹಬ್ಬದ ಪ್ರಯುಕ್ತ ಹಣ್ಣುಹಂಪಲು ವಿತರಣೆ

ಬಜಪೆ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಜಪೆ ಯೋಜನಾ ಕಛೇರಿ ವ್ಯಾಪ್ತಿಯ   ಮಾಸಾಶನ ಸೌಲಭ್ಯ ಪಡೆಯುವ 169 ಫಲಾನುಭವಿಗಳಿಗೆ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಜ್ಞಾನವಿಕಾಸದ ಅಧ್ಯಕ್ಷ ಮಾತೃಶ್ರೀ ಡಾ. ಹೇಮಾವತಿ ಅಮ್ಮನವರ ಹುಟ್ಟುಹಬ್ಬದ ಪ್ರಯುಕ್ತ ಹಣ್ಣುಹಂಪಲು ವಿತರಿಸಲಾಯಿತು .ಅಸಹಾಯಕತೆಯ ಜೀವನ ನಡೆಸುವ ಪ್ರತಿಯೊಬ್ಬರ ಅಸಹಾಯಕರ ಬಗ್ಗೆ ಕಾರುಣ್ಯ ಮತ್ತು ವಾತ್ಸಲ್ಯವನ್ನು ಹೊಂದಿರುವ ಮಾತೃಶ್ರೀ ಅಮ್ಮನವರು ಪ್ರತಿ  ತಿಂಗಳು ಬಜಪೆ ಯೋಜನಾ ಕಛೇರಿ ವ್ಯಾಪ್ತಿಯಲ್ಲಿ  169 ಫಲಾನುಭವಿಗಳಿಗೆ ಮಾಸಾಶನ ವಿತರಿಸುತ್ತಿದ್ದು ಅವರ ಜೀವನಕ್ಕೆ ಬೆಳಕಾಗಿದ್ದಾರೆ. ಅಂತಹ ವ್ಯಕ್ತಿಗಳಿಗೆ ವಾತ್ಸಲ್ಯಮಯಿ ಅಮ್ಮನವರ ಹುಟ್ಟುಹಬ್ಬದ ಪ್ರಯುಕ್ತ ಹಣ್ಣು ಹಂಪಲು ನೀಡಿ ಅತ್ಯಂತ ಅರ್ಥ ಪೂರ್ಣವಾಗಿ  ಆಚರಿಸಲಾಯಿತು.

ಈ ಸಂದರ್ಭ  ತಾಲೂಕಿನ ಯೋಜನಾಧಿಕಾರಿ  ಗಿರೀಶ್‌ ಕುಮಾರ್‌ ಎಂ, ವಲಯದ ಮೇಲ್ವಿಚಾರಕರು ಮತ್ತು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630

Advertise in articles 1

advertising articles 2

ಸುದ್ದಿ ,ಕಾರ್ಯಕ್ರಮಗಳ ನೇರಪ್ರಸಾರ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630

ಸುದ್ದಿಗಳಿದ್ದರೆ Chigurunewss@gmail.com ಗೆ ಕಳಿಸಿರಿ