ಬಜಪೆ ಥಂಡರ್ ಫೌಂಡೇಶನ್ (ರಿ) ಬಜ್ಪೆ ಮಂಗಳೂರು ಇದರ ಆಶ್ರಯದಲ್ಲಿ 'ಕಲರವ ಬೇಸಿಗೆ ಶಿಬಿರ -2026' ಉದ್ಘಾಟನೆ
ಬಜಪೆ:ಥಂಡರ್ ಫೌಂಡೇಶನ್ (ರಿ) ಬಜ್ಪೆ ಮಂಗಳೂರು ಇದರ ಆಶ್ರಯದಲ್ಲಿ 'ಕಲರವ ಬೇಸಿಗೆ ಶಿಬಿರ 2026 'ಬಜಪೆಯ ರಾಜಶ್ರೀ ಬಿಲ್ಡಿಂಗ್ ನಲ್ಲಿ ಎ. 12 ರಂದು
ಉದ್ಘಾಟನೆಗೊಂಡಿತು.
ಎಂ ಆರ್ ಪಿ ಎಲ್ ನ ಪ್ರಾಜೆಕ್ಟ್ ಡಿಪಾರ್ಟ್ ಮೆಂಟ್ ನ ಮ್ಯಾನೇಜರ್ ನಿತೇಶ್ ಎಸ್ ರಾವ್ ಅವರು ದೀಪ ಬೆಳಗಿಸಿ 8 ದಿನಗಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಬೇಸಗೆ ಶಿಬಿರಗಳ ಆಯೋಜನೆಯಿಂದ ಇತರರೊಂದಿಗೆ ಬೆರೆಯುವ ಮತ್ತು ಮಾತನಾಡುವ ಕಲೆ ವಿದ್ಯಾರ್ಥಿಗಳಲ್ಲಿ ಬೆಳೆಯುತ್ತದೆ. ವಿವಿಧ ಕ್ಷೇತ್ರಗಳ ತಜ್ಞರ ಮಾರ್ಗದರ್ಶನ ದೊರಕುವುದರಿಂದ ಮಕ್ಕಳಲ್ಲಿ 'ನನ್ನಿಂದಲೂ ಸಾಧ್ಯ' ಎನ್ನುವ ಭರವಸೆ ಮೂಡಲು ಸಾಧ್ಯ ಎಂದರು.
ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಶ್ರೀಮತಿ ವಿದ್ಯಾಲತಾ ಅವರು ಮಾತನಾಡಿ ಬಾಲ್ಯದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಗೆ ದಾಸರಾಗದೆ ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ಸೃಷ್ಟಿ ಶೀಲಾ ವಿಚಾರಗಳನ್ನು ಕಲಿತುಕೊಂಡು ತಮ್ಮ ಸೃಜನಾತ್ಮಕತೆ ಮತ್ತು ರಚನಾತ್ಮಕ ಕೌಶಲ್ಯಗಳನ್ನು ಹೆಚ್ಚಿಸಿ ದೇಶಭಕ್ತಿಯನ್ನು ಬೆಳೆಸಿ ಉತ್ತಮ ನಾಗರೀಕರಾಗಿ ಭಾರತದ ಭವ್ಯ ಭವಿಷ್ಯತ್ತನ್ನು ರೂಪಿಸಬೇಕು ಎಂದರು.
ಥಂಡರ್ ಗೈಸ್ ಫೌಂಡೇಶನ್ (ರಿ) ಬಜಪೆ ಯ ಅಧ್ಯಕ್ಷ ಸೂರಜ್ ಶೆಟ್ಟಿ ಅವರು ಶಿಬಿರದ ರೂಪುರೇಷೆಗಳನ್ನು ಶಿಬಿರಾರ್ಥಿಗಳಿಗೆ ಹಾಗೂ ಪೋಷಕರಿಗೆ ತಿಳಿಸಿದರು.
ಈ ಸಂದರ್ಭ ಬೈಕಂಪಾಡಿ ಇಂಡಸ್ಟ್ರಿಯಲ್ ಸಬ್ ಡಿವಿಷನ್ ನ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಗಣೇಶ್ ಕುಂದರ್ , ಸಂಸ್ಥೆಯ ಮೇಲ್ವಿಚಾರಕಿ ಶ್ರೀಮತಿ ಜಯಶ್ರೀ ಎಸ್ ಶೆಟ್ಟಿ, ಕಾರ್ಯನಿರ್ವಾಹಕಿ ಕುಮಾರಿ ನಿಖಿತಾ ಎಂ ಕೆ ಬಜ್ಪೆ ಉಪಸ್ಥಿತರಿದ್ದರು.
ಬಿ ಐ ಟಿ ಮಂಗಳೂರಿನ ಪ್ರಾಧ್ಯಾಪಕಿ ಶ್ರೀಮತಿ ಪರ್ವೀನ್ ತಾಜ್ ಇವರಿಂದ ಎಜುಕೇಶನಲ್ ಮ್ಯಾಜಿಕ್ ನಡೆಯಿತು. ಎಂಟು ದಿನಗಳ ಬೇಸಿಗೆ ಶಿಬಿರದಲ್ಲಿ ಡ್ರಾಯಿಂಗ್, ಕ್ರಾಫ್ಟ್, ನೇಚರ್ ಆರ್ಟ್,ಸಿಂಗಿಂಗ್,ಕ್ಷೇತ್ರ ಪ್ರವಾಸ, ಹಾರ್ಸ್ಮೆನ್ಶಿಪ್, ಸ್ವಿಮ್ಮಿಂಗ್, ಯೋಗ, ಎಂಪವರಿಂಗ್ ಮೈಂಡ್ ಆ್ಯಂಡ್ ಹಾರ್ಟ್, ರಂಗಕಲೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಬೇತಿಗಳು ನಡೆಯಲಿದೆ.
ಡಾ. ಅನಿತ್ ಕುಮಾರ್ ಸ್ವಾಗತಿಸಿದರು. ಯುವರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.