ತೋಕೂರು :ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ಆಶ್ಲೇಷ ಬಲಿ
Monday, March 2, 2026
ಸಾಮೂಹಿಕ ಆಶ್ಲೇಷ ಬಲಿಯು ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ನಡೆಯಿತು.
ಈ ಸಂದರ್ಭ ದೇವಸ್ಥಾನದ ಪ್ರಧಾನ ಅರ್ಚಕ ಟಿ .ಕೆ ಮಧುಸೂದನ್ ಆಚಾರ್, ಸಮಿತಿಯ ಅಧ್ಯಕ್ಷ ಗುರುರಾಜ್ ಎಸ್ ಪೂಜಾರಿ, ಸಮಿತಿ ಸದಸ್ಯರಾದ ಪುರುಷೋತ್ತಮ ಕೋಟ್ಯಾನ್, ಅಶೋಕ್ ಕುಂದರ್, ಸಂಪತ್ ಜೆ. ಶೆಟ್ಟಿ ತೋಕೂರುಗುತ್ತು, ಭಾಸ್ಕರ ದೇವಾಡಿಗ, ವಿಶ್ವನಾಥ್, ಸವಿತಾ ಶರತ್, ಶೋಭಾ ಅಂಚನ್, ಸಮಿತಿಯ ನಿಕಟಪೂರ್ವ ಅಧ್ಯಕ್ಷ ಹರಿದಾಸ್ ಭಟ್, ದೇವಸ್ಥಾನದ ಸಿಬ್ಬಂದಿ ವರ್ಗ ಊರ ಪರ ಊರ ಭಕ್ತರು ಉಪಸ್ಥಿತರಿದ್ದರು.