Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸಸಿಹಿತ್ಲುವಿನ ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮ

ಹಳೆಯಂಗಡಿ: ಸಸಿಹಿತ್ಲುವಿನ ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು  ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ರವರು ದೀಪ ಪ್ರಜ್ವಲನೆ ಉದ್ಘಾಟಿಸಿದರು. ಸಸಿಹಿತ್ಲು ಶ್ರೀಭಗವತೀ ದೇವಸ್ಥಾನದ ಆಡಳಿತ ಸಮಿತಿಯ  ಅಧ್ಯಕ್ಷ ವಾಮನ ಇಡ್ಯಾ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದರು. ಒಡಿಯೂರು ದಕ್ಷಿಣ ಗಾಣಗಾಪುರ, ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಶ್ರೀ ಗುರುದೇವಾನಂದ ಸ್ವಾಮೀಜಿ ರವರು ಆಶೀರ್ವಚನ ನೀಡಿದರು.
 ಕಸಾಪ ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಪ್ರಸಾದ್ ಶೆಟ್ಟಿ, “ಆರ್ಯನ್" ಲಚ್ಚಿಲ್ ಸಸಿಹಿತ್ಲು,ಹಳೆಯಂಗಡಿ ಗ್ರಾಪಂ ಮಾಜೀ ಅಧ್ಯಕ್ಷೆ ಪೂರ್ಣಿಮ,ಅಭಿವೃದ್ಧಿ ಅಧಿಕಾರಿ ಅರುಣ್‌ ಪ್ರದೀಪ್‌ ಡಿಸೋಜ,ಬಪ್ಪನಾಡು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಪಡುಪಣಂಬೂರು ಗ್ರಾಪಂ ಮಾಜೀ ಅಧ್ಯಕ್ಷೆ ಕುಸುಮಾ ಚಂದ್ರಶೇಖ‌ರ್, ಸಸಿಹಿತ್ಲು ಕದಿಕೆ ಮೊಗವೀರ ಮಹಾಸಭಾ ದ ಕಿಶೋರ್ ಗುರಿಕಾರ,ಮುಲ್ಕಿ ಸಸಿಹಿತ್ಲು  ಬಿಲ್ಲವರ ಹಿತವರ್ಧಕ ಸಂಘದ ಅಧ್ಯಕ್ಷ ಜಗನ್ನಾಥ ಕೋಟ್ಯಾನ್,ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಅಣ್ಣಪ್ಪ ದೇವಾಡಿಗ, ಮಂಗಳೂರು ಶ್ರೀ ಭಗವತೀ ಕೋ-ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌, ಅಧ್ಯಕ್ಷ ಮಾಧವ,ಉಳ್ಳಾಲ ಶ್ರೀ ಚೀರುಂಭಭಗವತೀ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಚಿದಾನಂದ ಗುರಿಕಾರ,ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ  ಸುರೇಶ್ ಭಟ್ನಗರ ಉಪಸ್ತಿತರಿದ್ದರು.

ವೇದಿಕೆಯಲ್ಲಿ ಸಾಧಕರ ನೆಲೆಯಲ್ಲಿ ಉಳ್ಳಾಲ ಶ್ರೀ ಭಗವತೀ ಕ್ಷೇತ್ರದ ಕಾರ್ನವರು, ರವಿ ಯಾನೆ ಕಂಡಪ್ಪ ಬಾಲಕೃಷ್ಣ ಯಾನೆ ಮಂಜಪ್ಪ ಕಾರ್ನವರು, ಮೀನಾ ಹಾಗೂ ರಾಘು ಪೂಜಾರಿ ಸಸಿಹಿತ್ಲು ರವರನ್ನು ಗೌರವಿಸಲಸಯಿತು.ನವೀನ್ ಶೆಟ್ಟಿ  ಎಡ್ಮೆಮಾರ್ ಸ್ವಾಗತಿಸಿದರು. ಪ್ರವೀಣ್‌ ಎಸ್.ಕುಂಪಲ ಕಾರ್ಯಕ್ರಮ  ನಿರೂಪಿಸಿ ಧನ್ಯವಾದವಿತ್ತರು.