Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಧಾರ್ಮಿಕ ನಂಬಿಕೆ ಬೆಳೆಯುವಲ್ಲಿ ದೇವಸ್ಥಾನಗಳ ಪಾತ್ರ ಮಹತ್ತರ -ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು

ಹಳೆಯಂಗಡಿ:ಸಮಾಜದಲ್ಲಿ ಧಾರ್ಮಿಕ ನಂಬಿಕೆ  ,ಸಾಂಸ್ಕೃತಿಕ ಮೌಲ್ಯಗಳು ಹಾಗೂ ಮಾನವೀಯತೆ ಬೆಳೆಯುವಲ್ಲಿ  ದೇವಸ್ಥಾನಗಳ ಪಾತ್ರ  ಮಹತ್ತರವಾಗಿದೆ ಎಂದು  ಚಿತ್ರಾಪುರ ಮಠದ  ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಹೇಳಿದರು. 
ಅವರು ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ  ಬ್ರಹ್ಮಕಲಶೋತ್ಸವದ ಅಂಗವಾಗಿ  ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ  ಆಶೀರ್ವಚನ ನೀಡಿ ಮಾತನಾಡಿದರು. 
 ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಳ್ಚಡ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಟೀಲು ದೇವಳದ  ಅನುವಂಶಿಕ ಅರ್ಚಕ ವೇದಮೂರ್ತಿ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಅವರು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೀಪಪ್ರಜ್ವಲನೆ ಗೊಳಿಸಿ  ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಭಗವತಿ ಕ್ಷೇತ್ರ ಕನಿಲದ  ಮಂಜಪ್ಪ ಕಾರ್ನವರು, ದೇರುಣ್ಣ, ಕಾರ್ನವರು,  ಭಗವತೀ ಕ್ಷೇತ್ರ, ಮಾಡೂರುನ  ನಾರಾಯಣ ಬಂಗೇರ, ಕಾರ್ನವರು, ಶ್ರೀ ಭಗವತೀ ಕ್ಷೇತ್ರ, ಬೊಳ್ನಾಡುವಿನ  ಚಂದ್ರಶೇಖರ ಕಾರ್ನವರಿಗೆ  ವಿಶೇಷ ಗೌರವಾರ್ಪಣೆ ಹಾಗೂ  ರಮೇಶ್ ಸನಿಲ್, ಸಸಿಹಿತ್ಲುರಿಗೆ ಗೌರವಾರ್ಪಣೆ ನಡೆಯಿತು. 
ಈ ಸಂದರ್ಭ ಶ್ರೀ ನಾರಾಯಣಗುರು ವಿದ್ಯಾಸಮೂಹ ಸಂಸ್ಥೆಯ ಅಧ್ಯಕ್ಷ  ನವೀನ್‌ ಚಂದ್ರ ಡಿ ಸುವರ್ಣ, ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಯಶ್‌ಪಾಲ್ ಸುವರ್ಣ, ಅಶೋಕ್ ಕುಮಾರ್ ರೈ, ವಿಧಾನ ಪರಿಷತ್‌ ಸದಸ್ಯ  ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, 
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ  ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಮೆಸ್ಕಾಂ ಅಧ್ಯಕ್ಷ  ಹರೀಶ್ ಕುಮಾರ್, ನಿಶಾಂತ್ ಶೆಟ್ಟಿ ಕಿಲೆಂಜೂರು, ಕಂಕನಾಡಿ  ಶ್ರೀ ಬ್ರಹ್ಮಬೈದರ್ಕಳ ಕ್ಷೇತ್ರದ ಅಧ್ಯಕ್ಷ  ಚಿತ್ತರಂಜನ್,  ಎಂ.ಆರ್.ಪಿ.ಎಲ್, ಓ.ಎನ್.ಜಿ.ಸಿಯ ನಿರ್ದೇಶಕ  ನಂದಕುಮಾರ್ ವೇಲಾಯುಧನ್ ಪಿಳ್ಳೆ, ಅದಾನಿ ಫೌಂಡೇಶನ್, ದಕ್ಷಿಣ ಭಾರತದ ಅಧ್ಯಕ್ಷ  ಕಿಶೋ‌ರ್ ಆಳ್ವ, ಸಸಿಹಿತ್ಲು ಭಗವತಿ ಕ್ಷೇತ್ರದ ಆಡಳಿತ ಸಮಿತಿ ಉಪಾಧ್ಯಕ್ಷ  ವಿಶ್ವನಾಥ ಬೆಳ್ಚಡ ,ಶ್ರೀ ವಿಜಯ ಗುರೂಜಿ, ಪೊಳಲಿ,ಜ್ಯೋತಿಷ್ಯಜ್ಞ ಮಧುಸೂದನನ್ ಎಂ., ವೈದ್ಯ ,, ಕಾಸರಗೋಡು,ಉದ್ಯಮಿ ಎಚ್. ಭಾಸ್ಕರ ಸಾಲ್ಯಾನ್,, ಉರ್ವ ಮಾರಿಯಮ್ಮ ದೇವಸ್ಥಾನದ  ಅಧ್ಯಕ್ಷ ಲಕ್ಷ್ಮಣ ಅಮೀನ್, ಬಿಲ್ಲವ ಸಂಘ, ಹಳೆಯಂಗಡಿಯ ಅಧ್ಯಕ್ಷ  ಚಂದ್ರಶೇಖರ್ ನಾನಿಲ್, ಉದ್ಯಮಿ  ಧೀರಜ್ ಶ್ರೀಯಾನ್,  ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ.) ಅಗ್ಗಿದಕಳಿಯ, ಸಸಿಹಿತ್ಲುವಿನ ಅಧ್ಯಕ್ಷ  ಪ್ರಕಾಶ್‌ ನಿಸರ್ಗ , ಉದ್ಯಮಿ ನಾರಾಯಣ ಸುವರ್ಣ,  ಶ್ರೀ ಭಗವತೀ ದೇವಸ್ಥಾನ, ಮಾಡೂರುನ ಅಧ್ಯಕ್ಷ ಜಯಪ್ರಕಾಶ್‌,ಶ್ರೀ ಭಗವತೀ ದೇವಸ್ಥಾನ, ಕನಿಲದ ಅಧ್ಯಕ್ಷ ವಿಶ್ವನಾಥ ಕುದ್ರು.ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪದ್ಮನಾಭ ಕಡಪುರ, ಸುವರ್ಣ ಮೂಲಸ್ಥಾನ, ಪಡುತೋಟದ ಸುಚೇಂದ್ರ ಅಮೀನ್‌ ಬರ್ಕೆ, ಸಸಿಹಿತ್ಲು ಕ್ಷೇತ್ರದ 
ಬ್ರಹ್ಮ ಕಲಶೋತ್ಸವ ಸಮಿತಿಯ  ಗೌರವಾಧ್ಯಕ್ಷೆ  ಗೀತಾ ಪಿ. ಕುಮಾರ್, ಜಿಲ್ಲಾ ಪಂಚಾಯತ್‌ ಮಾಜಿ ಉಪಾಧ್ಯಕ್ಷೆ  ಕಸ್ತೂರಿ ಪಂಜ,  ದೈವ ನರ್ತಕ ಹಾಗೂ ಜ್ಯೋತಿಷಿ ಡಾ. ವಾಮನ್ ಶಿಬರೂರು ಉಪಸ್ತಿತರಿದ್ದರು.