ಭಕ್ತಿಯ ನಂಬಿಕೆ ಬಲವಾದಲ್ಲಿ ದೇವಾಲಯ ಬೆಳಗುತ್ತದೆ : ದೇವಿಪ್ರಸಾದ್ ಶೆಟ್ಟಿ
ಹಳೆಯಂಗಡಿ:ನಮ್ಮಲ್ಲಿನ ಧಾರ್ಮಿಕ ನಂಬಿಕೆಗಳು ಭಕ್ತಿಯ ಮೂಲಕ ಬಲವಾದಲ್ಲಿ ಆರಾಧನೆ ಮಾಡುವ ದೇವಸ್ಥಾನಗಳು ಬೆಳಗುತ್ತದೆ. ಧರ್ಮದ ರಕ್ಷಣೆಯ ಹೊಣೆಯನ್ನು ನಿಭಾಯಿಸುವಾಗ ಸಂಘಟಿತರಾಗಿ ದೇವಸ್ಥಾನದ ಮೂಲಕ ಎಲ್ಲರ ಶ್ರೇಯಸ್ಸನ್ನು ಬಯಸುವಂತಾಗಬೇಕು, ನಮ್ಮ ಆಧ್ಯಾತ್ಮಿಕ ನಂಬಿಕೆ ಅಚಲವಾಗಿರಲಿ ಎಂದು
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೆಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು.
ಅವರು ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಳಿನ್‌ಕುಮಾರ್ ಕಟೀಲು ಅಧ್ಯಕ್ಷತೆ ವಹಿಸಿದ್ದರು.
ಶಾಸಕ ವೈ ಭರತ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಶಾಸಕಿ ಭಾಗೀರಥಿ ಮುರುಳ್ಯ ಶುಭ ಹಾರೈಸಿದರು.
ಪ್ರಧಾನ ಆರ್ಚಕ ಶ್ರೀನಿವಾಸ ಅಪ್ಪು ಪೂಜಾರಿ ಬ್ರಹ್ಮಕಲಶೋತ್ಸವಕ್ಕೆ ಸಹಕಾರ ನೀಡಿದ ದಾನಿಗಳನ್ನು, ವಿವಿಧ ಸಮಿತಿಯ ಪ್ರಮುಖರನ್ನು, ಗುರಿಕಾರರನ್ನು ಸನ್ಮಾನಿಸಿದರು.
ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ, ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಳ್ಳಡ, ಮುಂಬೈ ಸಮಿತಿ ಅಧ್ಯಕ್ಷ ವೇದಪ್ರಕಾಶ್ ಎಂ. ಶ್ರೀಯಾನ್, ಸಮಿತಿಯ ರಮೇಶ್ ಬಂಗೇರ, ಸುರೇಶ್ ಬಂಗೇರ ತೋಕೂರು, ಮುಂಬೈ ಕಲಿನ ಕ್ಷೇತ್ರದ ಕುಮಾರಸ್ವಾಮಿ, ಉಳ್ಳಾಲ ಕ್ಷೇತ್ರದ ಚಂದ್ರಹಾಸ್ ಉಳ್ಳಾಲ್, ಮುಂಬೈನ ಜಯಕೃಷ್ಣ ಶೆಟ್ಟಿ, ಉಪ್ಪಳ ಕ್ಷೇತ್ರದ ಸುಕುಮಾರ್ ಉಪ್ಪಳ, ಧರ್ಮಸ್ಥಳದ ಯೋಜನಾಧಿಕಾರಿ ಗಿರೀಶ್, ಮುಂಬೈಯ ಮೋಹನ್ ಕೋಟ್ಯಾನ್, ಪದ್ಮನಾಭ ಬಂಗೇರ, ಡಾ. ಸೋಂದಾ ಭಾಸ್ಕರ ಭಟ್, ಅರ್ಚಕ ಶ್ರೀಪತಿ ಭಟ್, ಮುರಾ ಸದಾಶಿವ ಶೆಟ್ಟಿ ಇದ್ದರು. ರಾಜೇಂದ್ರ ಪ್ರಸಾದ್ ಎಕ್ಕಾರು ನಿರೂಪಿಸಿದರು.