Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸಸಿಹಿತ್ಲುವಿನ ಶ್ರೀ ಭಗವತೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ

ಹಳೆಯಂಗಡಿ:ಸಸಿಹಿತ್ಲುವಿನ  ಶ್ರೀ ಭಗವತೀ ದೇವಸ್ಥಾನದಲ್ಲಿ ಭಾನುವಾರದಂದು  ಸಪರಿವಾರ ಶ್ರೀ ಭಗವತೀ ಅಮ್ಮನವರಿಗೆ ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿದ್ವಾನ್ ವೇದಮೂರ್ತಿ ಕೃಷ್ಣಮೂರ್ತಿ ಭಟ್ ಹೊಯ್ದೆಗುಡ್ಡೆ ಹಾಗೂ ಶ್ರೀಪತಿ ಭಟ್ ಹೊಯ್ದೆಗುಡ್ಡೆ ಅವರ ನೇತೃತ್ವದಲ್ಲಿ ವೇದಮೂರ್ತಿ ವೆಂಕಟೇಶ ತಂತ್ರಿ ಎಡಪದವು ಅವರ ಮಾರ್ಗದರ್ಶನದಲ್ಲಿ ನಡೆಯಿತು.
ಬೆಳಿಗ್ಗೆ  ಚಂಡಿಕಾ ಯಾಗ,  11:15ರ ವೃಷಭ ಲಗ್ನ ಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕವು ನಡೆಯಿತು.ಮಧ್ಯಾಹ್ನ  ಮಹಾಪೂಜೆ , ಪಲ್ಲ ಪೂಜೆ ಹಾಗೂ ಮಹಾ ಅನ್ನ ಸಂತರ್ಪಣೆಯು  ನಡೆಯಿತು.

ಈ ಸಂದರ್ಭ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಅರ್ಚಕ ಹಾಗೂ ಅನುವಂಶಿಕ ಮೊಕ್ತೇಸರ  ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ,ಶಾಸಕ ಉಮಾನಾಥ ಕೋಟ್ಯಾನ್, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಉದ್ಯಮಿ ಧನಂಜಯ ಶೆಟ್ಟಿ ಸಸಿಹಿತ್ಲು ,ಕೃಷ್ಣಶೆಟ್ಟಿ ಎಕ್ಕಾರು ಮುಂಬೈ,ಸುದರ್ಶನ್ ಮೂಡಬಿದ್ರೆ, ದೇವದಾಸ ಶೆಟ್ಟಿ ಬಂಟ್ವಾಳ, ಸಿಬಿ ಕರ್ಕೇರಾ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ರೋಹಿದಾಸ್ ಬಂಗೇರ ಮುಂಬೈ, ಅಧ್ಯಕ್ಷ  ನಳಿನ್ ಕುಮಾರ್ ಕಟೀಲ್, ಕ್ಷೇತ್ರದ ಆಡಳಿತ ಮೊಕ್ತೇಸರ  ಚಂದ್ರಶೇಖ‌ರ್ ಬೆಲ್ಬಡ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ವಾಮನ್ ಇಡ್ಯಾ, ಮುಂಬೈ ಸಮಿತಿ ಅಧ್ಯಕ್ಷ ವೇದ ಪ್ರಕಾಶ್ ಎಂ. ಶ್ರೀಯಾನ್, ಉಪಾಧ್ಯಕ್ಷ ವಿಶ್ವನಾಥ ಬೆಳ್ಳಡ,ಪದಾಧಿಕಾರಿಗಳಾದ ಚಂದ್ರಶೇಖರ ನಾಣಿಲ್, ಮುರ ಸದಾಶಿವ ಶೆಟ್ಟಿ, ರಮೇಶ್ ಬಂಗೇರ, ರಾಜೇಂದ್ರ ಪ್ರಸಾದ್ ಎಕ್ಕಾರು, ಶಿವಣ್ಣ ಅಂಚನ್ ಕಾಪು, ಈಶ್ವರ್  ಕಟೀಲು,ಸುರೇಶ್ ಬಂಗೇರ ತೋಕೂರು, ಗುರುರಾಜ್ ಮಲ್ಲಿಗೆಯಂಗಡಿ, ಶೆಡ್ಡೆ ಮಂಜುನಾಥ ಭಂಡಾರಿ, ಕಸ್ತೂರಿ ಪಂಜ,ವಿನೋದ್ ಸಾಲ್ಯಾನ್ ಬೆಳ್ಳಾಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪಾವಂಜೆ,ಹಳೆಯಂಗಡಿ ಹಾಗೂ ಪಡುಪಣಂಬೂರು ಕಡೆಗಳಿಂದ ಸಸಿಹಿತ್ಲು ಬ್ರಹ್ಮಕಲಶೋತ್ಸವಕ್ಕೆ  ಬರುವ ಭಕ್ತರಿಗೆ ಉಚಿತ ಬಸ್ ಹಾಗೂ ಕಿನ್ನಿಗೋಳಿ,ಮೂಲ್ಕಿ ಹಾಗೂ ಸುರತ್ಕಲ್ ಕಡೆಗಳಿಂದ  ಕ್ಷೇತ್ರಕ್ಕೆ ಬರುವ ಭಕ್ತರಿಗೆ   ಸರಕಾರಿ ಬಸ್ ನ ವ್ಯವಸ್ಥೆಯನ್ನು ಮಾಡಲಾಗಿತ್ತು.ಆಟೋದವರು ಕೂಡ ಉಚಿತ  ಸೇವೆಯನ್ನು  ಒದಗಿಸಿದ್ದರು.




 ಹಳೆಯಂಗಡಿ ದುರ್ಗಾಪರಮೇಶ್ವರೀ ವಿನಾಯಕ ಮಠ,ಪಡುಪಣಂಬೂರು ನಾಲ್ಕೂರು ಪಂಜುರ್ಲಿ ದೇವಸ್ಥಾನ ,ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ,ಕಾಳಿಕಾಂಬ ಮಹಿಳಾ ವೃಂದದವರಿಂದ ಕಲ್ಲಂಗಡಿ ಹಣ್ಣುಗಳನ್ನು ವಿತರಿಸಿದರು.



ಬ್ರಹ್ಮಕಲಶೋತ್ಸವದಲ್ಲಿ ಅಚ್ಚುಕಟ್ಟಾಗಿ ನಗುಮೊಗದಿಂದಲೇ  ಎಲ್ಲಾ ಸ್ವಯಂ ಸೇವಕರು ಸೇವೆಯನ್ನು ಸಲ್ಲಿಸಿದ್ದು,ಭಕ್ತರ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.ಬೇರೆ ಬೇರೆ ಊರುಗಳಿಂದ ಕ್ಷೇತ್ರಕ್ಕೆ ಬಂದ ಭಕ್ತರಿಂದಲೇ ಬಂದ ಮಾತುಗಳು.ಇಲ್ಲಿ ನ ವ್ಯವಸ್ಥೆಗಳ ಬಗ್ಗೆ ಮಾತಿಲ್ಲ.ಪಾರ್ಕಿಂಗ್ ನಿಂದ    ಆರಂಭವಾಗಿ ಊಟದ ವ್ಯವಸ್ಥೆ,ಅತಿಥಿ ಸತ್ಕಾರ ಸಹಿತ ಯಾವುದೇ ಮಾಹಿತಿಗಳು ಬೇಕಿದ್ದರೂ ತಕ್ಷಣವೇ ಸ್ಪಂದಿಸಿದ್ದಾರೆ ಬ್ರಹ್ಮಕಲಶೋತ್ಸವದಲ್ಲಿ ಸೇವೆ ಮಾಡಿದ ಸ್ವಯಂ ಸೇವಕರು.


ವಿಧಾನ ಸಭಾ ಸ್ಪೀಕರ್ ಯು.ಟಿ ಖಾದರ್ ಕ್ಷೇತ್ರಕ್ಕೆ ಭೇಟಿ ನೀಡಿದರು.ಕ್ಷೇತ್ರದ ವತಿಯಿಂದ ಅವರನ್ನು ಗೌರವಿಸಲಾಯಿತು.


ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಸಂಜೆ  ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಗಂಗೆಗೆ ನುಡಿನಮನ,ಅದ್ದೂರಿ ವೈಭವದ ಗಂಗಾರತಿ ಹಾಗೂ ಕಲಾಸಿರಿ ಬಳಗ ಮಂಗಳೂರು ಇವರಿಂದ ಭಕ್ತಿ ಭಾವ ಗಾನ ನಡೆಯಿತು.

ಕ್ಷೇತ್ರಕ್ಕೆ ಬರುವ ಭಕ್ತರಿಗೆ ಬೆಳಿಗ್ಗೆ ಹಾಗೂ ಸಂಜೆ ಉಪಹಾರದ ವ್ಯವಸ್ಥೆ ,ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು.