ಪೆರಾರ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ, ನೇಮೋತ್ಸವ
ಬಜಪೆ:ಶ್ರೀ ಕ್ಷೇತ್ರ ಪೆರಾರ ಬ್ರಹ್ಮದೇವರು ಇಷ್ಟ ದೈವತಾ ಬಲವಾಂಡಿ ಪಿಲಿಚಾಮುಂಡಿ ದೈವಸ್ಥಾನ ವರ್ಷಾವಧಿ ಜಾತ್ರೆ, ನೇಮೋತ್ಸವ ಧಾರ್ಮಿಕ, ಸಾಂಪ್ರದಾಯಿಕ ವಿಧಿವಿದಾನಗಳು ನಡೆಯಿತು.
ಆರಂಭದಲ್ಲಿ ಸಾರತ್ತೊಂಜಿ ಪಾಲೆದ (ಸಾವಿರದ ಒಂದು ಅಡಕೆ ಹಾಳೆಯ) ಆನೆ ಧರಿಸಿದ ಅರಸು ಉಳ್ಳಾಯ ದೈವದ ನೇಮ ನಡೆದು ನಂತರ ಬಲವಾಂಡಿ ದೈವದ ನೇಮ- ಬಂಡಿ ಉತ್ಸವ ಮುಂಜಾನೆಯವರೆಗೂ ನಡೆಯಿತು. ಕ್ಷೇತ್ರದ ಮಧ್ಯಸ್ಥ ಗಡಿಕಾರ ಪ್ರತಾಪ್ ಚಂದ್ರ ಶೆಟ್ಟಿ ಬ್ರಾಣಬೆಟ್ಟುಗುತ್ತು, ಕ್ಷೇತ್ರದ ಆಡಳಿತ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಮೋಹನ್ ದಾಸ್ ರೈ ಮುಂಡಬೆಟ್ಟುಗುತ್ತು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಡಾ. ವೈ.ಭರತ್ ಶೆಟ್ಟಿ ಆಡಳಿತ ವ್ಯವಸ್ಥಾಪನಾ ಸಮಿತಿ ಸದಸ್ಯರು, ಪೆರಾರ ಕ್ಷೇತ್ರಕ್ಕೆ ಸಂಬಂಧಿ ಸಿದಂತೆ ಇರುವ 16 ಗುತ್ತು ಮನೆತನಗಳ ಪ್ರಮುಖರು ಉಪಸ್ಥಿತರಿದ್ದರು.