ಪಚ್ಚನಾಡಿ ವಾರ್ಡಿನ ಪದವಿನಂಗಡಿಯಲ್ಲಿ ಪಾರಾದೀಪ್ ಫೋಸ್ಫೇಟ್ ಲಿಮಿಟೆಡ್ (MCF) ಸಂಸ್ಥೆಯ CSR ನಿಧಿಯಡಿ 30 ಲಕ್ಷ ಅನುದಾನದಿಂದ ನಿರ್ಮಾಣಗೊಂಡ ನೂತನ ಅಂಗನವಾಡಿ ಕಟ್ಟಡದ ಉದ್ಘಾಟನೆ
ಮಂಗಳೂರು:ಪಚ್ಚನಾಡಿ ವಾರ್ಡಿನ ಪದವಿನಂಗಡಿಯಲ್ಲಿ ಪಾರಾದೀಪ್ ಫೋಸ್ಫೇಟ್ ಲಿಮಿಟೆಡ್ (MCF) ಸಂಸ್ಥೆಯ CSR ನಿಧಿಯಡಿ 30 ಲಕ್ಷ ಅನುದಾನದಿಂದ ನಿರ್ಮಾಣಗೊಂಡ ನೂತನ ಅಂಗನವಾಡಿ ಕಟ್ಟಡವನ್ನು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿಯವರು ಉದ್ಘಾಟಿಸಿದರು.
ಈ ಸಂದರ್ಭ ಪಚ್ಚನಾಡಿ ವಾರ್ಡಿನ ನಿಕಟ ಪೂರ್ವ ಕಾರ್ಪೊರೇಟರ್ ಶ್ರೀಮತಿ ಸಂಗೀತಾ ಆರ್ ನಾಯಕ್, ಪಾರಾದೀಪ್ ಫೋಸ್ಫೇಟ್ ಲಿಮಿಟೆಡ್ ಸಂಸ್ಥೆಯ ಸಿ.ಎಂ.ಓ ಗಿರೀಶ್, ಜಾಯಿಂಟ್ ಜನರಲ್ ಮ್ಯಾನೇಜರ್ ಡಾ. ಯೋಗೀಶ್, ರಾಕೇಶ್ ವಿವೇಕ್ ಕೋಟಿಯನ್, ಸುಭಾಷ್, ರವಿಚಂದ್ರ, ಭೂ ನ್ಯಾಯ ಮಂಡಳಿಯ ಮಾಜಿ ಸದಸ್ಯ ಸಂದೀಪ್ ಬೋಂದೆಲ್, ಪದವಿನಂಗಡಿ ಯೂತ್ ಕ್ಲಬ್ ನ ಅಧ್ಯಕ್ಷ ಶೇಖರ್ ಪೂಜಾರಿ, ಗೌರವ ಅಧ್ಯಕ್ಷ ಕೇಶವ್ ಮಾರ್ಲಾ, ಮಹಿಳಾ ಮತ್ತು ಮಕ್ಕಳ ಅಭಿರುದ್ಧಿ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಸಿಂಧೂ, ಅಂಗನವಾಡಿ ಶಿಕ್ಷಕಿ ಶ್ರೀಮತಿ ಲೋಲಕ್ಷಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.